ದೇಶ

ಗೋಹತ್ಯೆಕಾನೂನು: ಸಲಹೆ ಕೇಳಿದ ಪಿಎಂಒ

Srinivasamurthy VN

ನವದೆಹಲಿ: ಗೋಹತ್ಯೆ ನಿಷೇಧಿಸಿ ಈಗಾಗಲೇ ಕೆಲ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾಯ್ದೆಗಳನ್ನು ಇತರೆ ರಾಜ್ಯಗಳೂ ಮಾದರಿಯಾಗಿ ತೆಗೆದುಕೊಳ್ಳುವಂತೆ ಸುತ್ತೋಲೆ ಹೊರಡಿಸಬಹುದೇ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ಕಾನೂನು ಸಚಿವಾಲಯವನ್ನು ಕೇಳಿದೆ.

ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ಜಾರ್ಖಂ ಡ್‍ನಂಥ ರಾಜ್ಯಗಳು ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿವೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಇತರೆ ರಾಜ್ಯಗಳು ತಮಗೆ ಸರಿಕಂಡ ಕಾನೂನು ರೂಪಿಸಿಕೊಳ್ಳುವಂತೆ ಸುತ್ತೋಲೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ. ಈ ರೀತಿಯ ಸುತ್ತೋಲೆ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೇಳಲಾಗುತ್ತಿದ್ದರೂ ಅದಕ್ಕೂ ಮೊದಲು ಕಾನೂನು ಸಲಹೆ ಪಡೆಯಲು ಪಿಎಂಒ ಮುಂದಾಗಿದೆ.

SCROLL FOR NEXT