ದೇಶ

ಆರ್ಥಿಕ ಸಬಲ ಮಹಿಳೆ ಜೀವನಾಂಶ ಕೇಳುವಂತಿಲ್ಲ

Vishwanath S

ಮುಂಬೈ: ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಪತಿಯಿಂದ ಜೀವನಾಂಶ ಕೇಳುವಂತಿಲ್ಲ.

ಹೀಗೆಂದು ಮುಂಬೈನ ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆಹಾರ ತಜ್ಞೆಯೊಬ್ಬರು ಪತಿಯಿಂದ ಪ್ರತಿ ತಿಂಗಳು ರು. 2 ಲಕ್ಷ ಜೀವನಾಂಶ ಕೇಳಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ವೇಳೆ ನೀಡಿದ ಆದೇಶದಲ್ಲಿ ಕೋರ್ಟ್ ಈ ಅಭಿಪ್ರಾಯ ಪಟ್ಟಿದೆ.

ಸ್ನಾತಕೋತ್ತರ ಪದವಿ ಪಡೆದ ಮಹಿಳೆ ದುಡಿಯುವ ಅರ್ಹತೆ ಇದ್ದು, ಸುಮ್ಮನೆ ಕುಳಿತರೆ ಜೀವನಾಂಶ ನೀಡಲಾಗದು. ಅದಕ್ಕಾಗಿ ವ್ಯವಸ್ಥೆಯ ದುರ್ಬಳಕೆ ಸಲ್ಲದು. ಇಂಥ ಬೆಳವಣಿಗೆಗಳು ಹೆಚ್ಚುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದೆ ಕೋರ್ಟ್.

ಏನಿದು ಪ್ರಕರಣ?: 2 ವರ್ಷಗಳ ಹಿಂದೆ ಮುಸ್ಲಿಂ ಮಹಿಳೆ ಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಳು. ಪತಿಯ ಮನೆಯವರು ಹಿಂಸೆ ನೀಡುತ್ತಿದ್ದಾರೆ. ಮದುವೆ ವೇಳೆ ರು. 50 ಲಕ್ಷ ವರದಕ್ಷಿಣೆ, ಚಿನ್ನ, ಕಾರಿನ ಬೇಡಿಕೆ ಮುಂದಿಟ್ಟಿದ್ದರು. ಕಡಿಮೆ ವರದಕ್ಷಿಣೆ ತಂದಿದ್ದರಿಂದ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು.

ಹೀಗಾಗಿ, ಹೆತ್ತವರ ಜತೆ ವಾಸಿಸುವ ಪರಿಸ್ಥಿತಿ ಬಂದೊಗಿತು ಎಂದು ಮಹಿಳೆ ವಾದಿಸಿದ್ದರು. ತಮ್ಮ ಪತಿ ದುಬೈ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಉದ್ದಿಮೆ ನಡೆಸುತ್ತಿದ್ದು, ಪ್ರತಿ ತಿಂಗಳು ರು.15 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಯಾವುದೇ ಆದಾಯ ಇಲ್ಲದಿರುವ ತನಗೆ ಮಾಸಿಕ ರು. 2 ಲಕ್ಷ ಜೀವನಾಂಶ ನೀಡಬೇಕೆಂದು ಕೋರ್ಟ್‍ಗೆ ಮನವಿ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪತಿ `ಪತ್ನಿಗೆ ಪ್ರತಿ ತಿಂಗಳು ರು. 50 ಸಾವಿರ ಆದಾಯ ಗಳಿಸುತ್ತಿದ್ದಾಳೆ' ಎಂದು ಉತ್ತರಿಸಿದ್ದರು. ಮಹಿಳೆಯನ್ನು ಕಾನೂನು ಬದ್ಧವಾಗಿ ವಿವಾಹವಾಗಿಲ್ಲದ್ದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಪತಿ ಮಂಡಿಸಿದ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಆಕೆಯ ಮರು ಮದುವೆಯವರೆಗೆ ಜೀವನಾಂಶ ನೀಡಬಹುದು ಎಂದಿದೆ.

ಆದರೆ ಪ್ರಕರಣವನ್ನು ಕೋರ್ಟ್‍ಗೆ ತಂದ ಮಹಿಳೆ ಆಹಾರ ಸಂಸ್ಕರಣಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಆಕೆಗೆ ಜೀವನಾಂಶ ನೀಡಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

SCROLL FOR NEXT