ನವದೆಹಲಿ: ಹಣಕಾಸು ಅವ್ಯವಹಾರ ತಡೆ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಸುಮಾರು 480 ನಗರ ಸಹಕಾರಿ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಣ್ಣಿಟ್ಟಿದೆ.
ಕಾನೂನು ಉಲ್ಲಂಘಿಸಿದ ಬ್ಯಾಂಕುಗಳಿಗೆ ದಂಡ ಹಾಗೂ ಅಂತಹ ಬ್ಯಾಂಕುಗಳ ಶಾಖೆ ವಿಸ್ತರಣೆಗೆ ನಿರಾಕರಣೆ ಮತ್ತಿತರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆರ್‌ಬಿಐ ನಿರ್ಧರಿಸಿದೆ.
ನೋ ಯುವರ್ ಕಸ್ಟಮರ್(ಕೆವೈಸಿ), ಹಣಕಾಸು ಅವ್ಯವಹಾರ ತಡೆ ಹಾಗೂ ಭಯೋತ್ಪಾದನೆಗೆ ಹಣಕಾಸು ತಡೆ ಮಾರ್ಗದರ್ಶಿ ಸೂತ್ರಗಳನ್ನು ಈ ಬ್ಯಾಂಕುಗಳು ಅನುಸರಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವಂತೆ ಆರ್‌ಬಿಐ ತನ್ನ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ.