ಗೋವು 
ದೇಶ

ಮಹಾರಾಷ್ಟ್ರ ನಂತ್ರ ಹರಿಯಾಣದಲ್ಲೂ ಗೋಮಾಂಸ ಮಾರಾಟ ನಿಷೇಧ

ಗೋಹತ್ಯ ಮತ್ತು ಗೋಮಾಂಸ ಮಾರಾಟವನ್ನು ಇತ್ತೀಚೆಗಷ್ಟೆ ಮಹಾರಾಷ್ಟ್ರ ಸರ್ಕಾರ ಬ್ಯಾನ್ ಮಾಡಿತ್ತು.

ಚಂಡೀಗಢ: ಗೋಹತ್ಯ ಮತ್ತು ಗೋಮಾಂಸ ಮಾರಾಟವನ್ನು ಇತ್ತೀಚೆಗಷ್ಟೆ ಮಹಾರಾಷ್ಟ್ರ ಸರ್ಕಾರ ಬ್ಯಾನ್ ಮಾಡಿತ್ತು. ಅದೇ ರೀತಿ ಇದೀಗ ಹರಿಯಾಣಾ ಸರ್ಕಾರವು ಗೋಹತ್ಯೆ ಹಾಗೂ ಗೋಮಾಂಸ ಮಾರಾಟವನ್ನು ನಿಷೇಧಿಸಿದೆ.

ಗೋವಂಶ ಸಂರಕ್ಷಣೆ ಹಾಗೂ ಗೋಸಂವರ್ಧನೆ ವಿಧೇಯಕ, 2015 ಅನ್ನು ಹರಿಯಾಣ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿದೆ. ವಿಧೇಯಕದ ಅನ್ವಯ, ಗೋಹತ್ಯೆ ಮಾಡಿದವರು ಜೈಲು ಶಿಕ್ಷೆಗೆ ಗುರಿಯಾಗಬೇಕಾಗಿದೆ.

ಅಂತಹ ಅಪರಾಧಿಗಳಿಗೆ ಕನಿಷ್ಠ ೩ ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಆಗಲಿದೆ. ಜತೆಗೆ, 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ದಂಡ ಪಾವತಿಸಲು ವಿಫಲವಾದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ನಿಷೇಧವನ್ನು ಉಲ್ಲಂಘಿಸಿದರೆ ಜಾಮೀನು ರಹಿತ ಬಂಧನ ಆದೇಶ ಹೊರಡಿಸಬಹುದು.

ಪಶುಸಂಗೋಪನೆ ಸಚಿವ ಓಂ ಪ್ರಕಾಶ್‌ ಧನಕರ್‌ ಮಂಡಿಸಿದ ವಿಧೇಯಕದಲ್ಲಿ, 'ಗೋಮಾಂಸ ಮಾರಾಟ ಅಥವಾ ಮಾರಾಟಕ್ಕೆ ಆಮಿಷ ಅಥವಾ ಗೋಮಾಂಸ ಹಾಗೂ ಅದರ ಉತ್ಪನ್ನದ ಮಾರಾಟಕ್ಕೆ ಯಾವುದೇ ವ್ಯಕ್ತಿ ಕಾರಣವಾಗಬಾರದು,'ಎಂದು ಹೇಳಲಾಗಿದೆ.

ಗೋಹತ್ಯೆ, ಗೋಮಾಂಸ ಮಾರಾಟ ನಿರ್ಬಂಧಿಸುವ ಹೊಸ ವಿಧೇಯಕ, ಗೋಸಂರಕ್ಷಣೆಗೆ ಒತ್ತು ನೀಡುತ್ತದೆ. ದೇಶೀಯ ತಳಿಗಳ ಅಭಿವೃದ್ಧಿ ಹಾಗೂ ದುರ್ಬಲ, ಗಾಯಗೊಂಡ, ಹಾಲು ನೀಡದ ಮತ್ತು ಬೀದಿಹಸುಗಳ ರಕ್ಷಣೆ, ನಿರ್ವಹಣೆಗೆ ಸಂಸ್ಥೆ ಸ್ಥಾಪಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ನೇರವಾಗಿ ಅಥವಾ ಏಜೆಂಟ್‌ ಮೂಲಕ ಯಾವುದೇ ವ್ಯಕ್ತಿ ಮಾಂಸಕ್ಕಾಗಿ ಗೋವನ್ನು ರಫ್ತು ಮಾಡುವುದು ಕಂಡುಬಂದಲ್ಲಿ ಅಂಥವರಿಗೆ 7 ವರ್ಷ ಜೈಲು ಹಾಗೂ 70,000ರೂ.ವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಈವರೆಗಿನ ಕಾನೂನಿನ ಪ್ರಕಾರ, ಗೋಮಾಂಸ ಮಾರಾಟಕ್ಕೆ ನಿಷೇಧವಿದ್ದರೂ ಪ್ಯಾಕ್‌ ಮಾಡಿದ ಗೋಮಾಂಸ ಮಾರಾಟಕ್ಕೆ ನಿಷೇಧ ಇರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!