ಲೋಕಸಭೆ 
ದೇಶ

ಗಂಗೆಯನ್ನು ತಂದಿದ್ದು ಯಾರು?

ಗಂಗಾ ನದಿಯ ಮೂಲದ ಬಗ್ಗೆ ಬಿಜೆಪಿ ಸಂಸದರೊಬ್ಬರು ಕೇಳಿದ ಪ್ರಶ್ನೆ ಎಲ್ಲ ಸದಸ್ಯರನ್ನು ಅವಕ್ಕಾಗಿಸಿದ ಪ್ರಸಂಗ ಲೋಕಸಭೆಯಲ್ಲಿ ಗುರುವಾರ ನಡೆಯಿತು...

ನವದೆಹಲಿ: ಗಂಗಾ ನದಿಯ ಮೂಲದ ಬಗ್ಗೆ ಬಿಜೆಪಿ ಸಂಸದರೊಬ್ಬರು ಕೇಳಿದ ಪ್ರಶ್ನೆ ಎಲ್ಲ ಸದಸ್ಯರನ್ನು ಅವಕ್ಕಾಗಿಸಿದ ಪ್ರಸಂಗ ಲೋಕಸಭೆಯಲ್ಲಿ ಗುರುವಾರ ನಡೆಯಿತು.

ಶೂನ್ಯ ವೇಳೆಯಲ್ಲಿ ಎದ್ದು ನಿಂತ ಸಂಸದ ಪ್ರತಾಪ್‍ಸಿನ್ಹಾ ಚೌಹಾಣ್, `ಗಂಗೆಯನ್ನು ಭೂಮಿಗೆ ತಂದವರಾರು? ಅದನ್ನೇಕೆ ತಂದರು... ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಏನು ಪ್ರಯೋಜನ ಎಂದು ನನಗೆ ಗೊತ್ತಾಗಬೇಕು' ಎಂದರು.

ಈ ಪ್ರಶ್ನೆ ಕೇಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಮುಖ ಮುಖ ನೋಡಿಕೊಂಡು ಗೊಳ್ಳೆಂದು ನಕ್ಕುಬಿಟ್ಟರು. ಸ್ವತಃ ಸ್ಪೀಕರ್ ಕೂಡ ಗೊಂದಲಕ್ಕೀಡಾಗಿ, `ಏನಿದು? ಇದೂ ಒಂದು ಪ್ರಶ್ನೆಯೇ?' ಎಂದು ಕೇಳಿದರು. ನಂತರ ಅದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಹಾಯಕ ಸಚಿವ ಸನ್ವಾರ್ ಲಾಲ್ ಜಾಟ್, ಇದೊಂದು ಐತಿಹಾಸಿಕ ವಿಚಾರ. ಜನರ ಕ್ಷೇಮಾಭಿವೃದ್ದಿಗಾಗಿ ಶಿವನನ್ನು ಒಲಿಸಿ ಭಗೀ ರಥನು ಗಂಗೆಯನ್ನು ಭೂಮಿಗೆ ತಂದ ಎಂಬುವುದು ಪ್ರತೀತಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video