ರಾಜ್ಯಸಭೆ 
ದೇಶ

ಕಲ್ಲಿದ್ದಲು, ಗಣಿ ವಿಧೇಯಕ ಪಾಸ್

ಹಣಕಾಸು ಕ್ಷೇತ್ರದಲ್ಲಿ ಸುಧಾರ ಣೆಗಳನ್ನು ಮಾಡಲು ಮುಂದಾಗಿರುವ ಮೋದಿ ಸರ್ಕಾರಕ್ಕೆ ನೆಮ್ಮದಿ. ಬಹುಚರ್ಚಿತ ಕಲ್ಲಿದ್ದಲು ಮತ್ತು ಗಣಿ ಮತ್ತು ಖನಿಜ ವಿಧೇಯಕ ರಾಜ್ಯಸಭೆ...

ನವದೆಹಲಿ: ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಲು ಮುಂದಾಗಿರುವ ಮೋದಿ ಸರ್ಕಾರಕ್ಕೆ ನೆಮ್ಮದಿ. ಬಹುಚರ್ಚಿತ ಕಲ್ಲಿದ್ದಲು ಮತ್ತು ಗಣಿ ಮತ್ತು ಖನಿಜ ವಿಧೇ
ಯಕ ರಾಜ್ಯಸಭೆ ಅನುಮೋದನೆ ಪಡೆದಿದೆ. 117 ಮಂದಿ ಪರವಾಗಿ, 69 ಮಂದಿ ವಿರೋಧವಾಗಿ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಎರಡೂ
ವಿಧೇಯಕಗಳ ವಿರುದ್ಧ ಮತ ಹಾಕಿದರೆ, ಜೆಡಿಯು ಸಭಾತ್ಯಾಗ ಮಾಡಿತು. ಟಿಎಂಸಿ, ಎಸ್‍ಪಿ, ಬಿಎಸ್‍ಪಿ ಸರ್ಕಾರದ ಪರ ನಿಂತ ಹಿನ್ನೆಲೆಯಲ್ಲಿ ಶುಕ್ರವಾರ ಸುಲಭವಾಗಿ 2
ವಿಧೇಯಕಗಳಿಗೆ ಅನುಮತಿ ಸಿಕ್ಕಿತು. ಗಣಿ ಮತ್ತು ಖನಿಜ ವಿಧೇಯಕವನ್ನು ಲೋಕಸಭೆ ಯಲ್ಲಿ ಮಂಡಿಸಿದ ವೇಳೆ, ಕೇವಲ 20 ನಿಮಿಷದಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿತ್ತು.
ಕಪ್ಪುಹಣ ವಿಧೇಯಕ ಮಂಡನೆ: ಈ ಮಧ್ಯೆ ಕೇಂದ್ರ ಸರ್ಕಾರ ಬಹು ಚರ್ಚಿತ ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ(ಹೊಸ ತೆರಿಗೆ ವಿ„ಸುವಿಕೆ) ವಿಧೇಯಕ
2015ನ್ನು ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಪ್ರಸ್ತಾವಿತ ವಿಧೇಯಕದಲ್ಲಿ ಉಲ್ಲೇಖಿಸಿ ರುವಂತೆ ಮಾಹಿತಿ ಬಹಿರಂಗಪಡಿಸದೇ ಇದ್ದರೆ 10 ವರ್ಷಗಳ ಕಠಿಣ ಸಜೆ, ಶೇ. 90ರಷ್ಟು ದಂಡ ವಿಧಿಸುವ ಅವಕಾಶ ಇದೆ.

ಮತ್ತೊಮ್ಮೆ ಸುಗ್ರೀವಾಜ್ಞೆ ?:
ಕೇಂದ್ರದ ಮಹತ್ವಾಕಾಂಕ್ಷಿ ಭೂಸ್ವಾಧೀನ ವಿಧೇಯಕಕ್ಕೆ ಲೋಕಸಭೆ ಅಂಗೀಕಾರ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಮಂಡನೆಗೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ವಿರೋಧಿಸಿವೆ. ಹೀಗಾಗಿ, ಮತ್ತೊಮ್ಮೆ ಈ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸಂಪುಟ ಶನಿವಾರ ನಿರ್ಧಾರ
ಕೈಗೊಳ್ಳಲಿದೆ ಎಂದಿದ್ದಾರೆ ವಿತ್ತ ಸಚಿವ ಅರುಣ್ ಜೇಟ್ಲಿ. ಮುಂದಿನ ತಿಂಗಳ 5ಕ್ಕೆ ಸದ್ಯ ಹೊರಡಿಸಿರುವ ಸುಗ್ರೀವಾಜ್ಞೆಯ ಅವಧಿ ಮುಕ್ತಾಯವಾಗುತ್ತದೆ.
ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ನಿಟ್ಟಿನಲ್ಲಿ ಕಲಾಪ 2 ದಿನ ವಿಸ್ತರಣೆಯಾಗುತ್ತದೆ ಎಂದು ನಿರೀಕ್ಷೆ ಇದ್ದಾಗಲೇ ಲೋಕಸಭೆ ಮತ್ತು ರಾಜ್ಯಸಭೆ
ಕಲಾಪಗಳನ್ನು ಏ.20ರ ವರೆಗೆ ಮುಂದೂಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ