ನವದೆಹಲಿ: ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನುಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆಸೂಚಿಸಿದೆ. ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಸಲ್ಲಿ ಸಿದ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ನ್ಯಾ. ಎ.ಆರ್. ದವೆ ಮತ್ತು ನ್ಯಾ. ಅಮಿತವ ರಾಯ್ ಅವರಿದ್ದ ಪೀಠ, ಸ್ವಾಮಿ ಸಲ್ಲಿಸಿದ್ದ ಅಗತ್ಯ ಸೌಲಭ್ಯ ಗಳನ್ನೊಳಗೊಂಡ ಮನವಿ
ಯನ್ನು ಪರಿಗಣ ನೆಗೆ ತೆಗೆದುಕೊಂಡಿತು. ಶ್ರೀ ಕ್ಷೇತ್ರಕ್ಕೆ ರಾಮನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಅಗತ್ಯವಿರುವ ಕುಡಿಯುವ ನೀರು ಮತ್ತುಶೌಚಾಲಯದ ವ್ಯವಸ್ಥೆ ಕೊರತೆ ನೀಗಿಸಿ ಎಂದು ಸೂಚಿಸಿದೆ.