ಯುಕೆ ಕೋರ್ಟ್ 
ದೇಶ

ನಿಜಾಮ್ ಕೇಸ್ ಗೆದ್ದ ಭಾರತ: 67 ವರ್ಷಗಳ ಕೇಸು ಇತ್ಯರ್ಥಗೊಳಿಸಿದ ಬ್ರಿಟನ್ ಕೋರ್ಟ್

ಭಾರತ ಮತ್ತು ಪಾಕಿಸ್ತಾನ ನಡುವೆ 67 ವರ್ಷಗಳಿಂದ ನಡೆಯುತ್ತಿದ್ದ ಹೈದರಾಬಾದ್ ಫಂಡ್ ಕೇಸ್ ಇತ್ಯರ್ಥವಾಗಿದೆ.

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ 67 ವರ್ಷಗಳಿಂದ ನಡೆಯುತ್ತಿದ್ದ ಹೈದರಾಬಾದ್ ಫಂಡ್ ಕೇಸ್ ಇತ್ಯರ್ಥವಾಗಿದೆ. ಯುನೈಟೆಡ್ ಕಿಂಗ್‍ಡಮ್ ನ ಕೋರ್ಟ್ ಭಾರತದ ಪರವಾಗಿ ತೀರ್ಪು ನೀಡಿದ್ದು, ರು. 1.39 ಕೋಟಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಜತೆಗೆ ಈ ವಿಚಾರದಲ್ಲಿ ಪಾಕಿಸ್ತಾನ ಅನುಸರಿಸಿದ ವರ್ತನೆ ಒಪ್ಪತಕ್ಕದಲ್ಲ ಎಂದೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಯಾವದೇ ಸಾರ್ವಭೌಮತ್ವ ರಕ್ಷಣೆ ಇಲ್ಲ ಎಂದು ಕೋರ್ಟ್ ಆದೇಶ ನೀಡಿದೆ. ಈ ಮೊತ್ತವನ್ನು ಲಂಡನ್ ನಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ನೀಡಬೇಕೆಂದು ಆದೇಶ ನೀಡಿದೆ.

ಖರ್ಚಿನ ಮೊತ್ತ: ಪ್ರಕರಣದ ಆರಂಭದಿಂದ ಈವರೆಗೆ ಭಾರತ ಸರ್ಕಾರ, ನ್ಯಾಷನಲ್ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ಮತ್ತು ನಿಜಾಮರ ವಂಶಸ್ಥರಿಗೆ ಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸಲು ರು. 372 ಕೋಟಿ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಈ ಪೈಕಿ ಭಾರತ ಸರ್ಕಾರ ರು. 1.39 ಕೋಟಿ ವೆಚ್ಚ ಮಾಡಿತ್ತು. ಅದನ್ನೀಗ ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಕೋರ್ಟ್ ಆದೇಶಿಸಿದೆ. ಈ ಹಣದ ಮೇಲೆ ಪಾಕಿಸ್ತಾನದ ಸಾರ್ವ ಭೌಮತ್ವದ ಹಕ್ಕನ್ನು ಕೋರ್ಟ್ ನಿರಾಕರಿಸಿರುವ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿರುವ ಈ ಹಣ ವನ್ನು ತನ್ನ ವಶಕ್ಕೆ ಪಡೆಯಲು ಭಾರತಕ್ಕೆ ಅವಕಾಶದ ಬಾಗಿಲು ತೆರೆದಂತೆ ಆಗಿದೆ. ಈ ಸಂಬಂಧದಲ್ಲಿ ಭಾರತ ಸರ್ಕಾರ ಮತ್ತು ನಿಜಾಂನ ಉತ್ತರಾಧಿಕಾರಿಗಲು ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

ಏನಿದು ಪ್ರಕರಣ?: ಭಾರತದಿಂದ ಪ್ರತ್ಯೇಕವಾಗಿ ಪಾಕಿಸ್ತಾನ ರಾಷ್ಟ್ರ ರಚನೆ ಮಾಡಿದ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‍ಡಮ್ ನಲ್ಲಿ ಪಾಕಿಸ್ತಾನದ ಮೊದಲ ಹೈಕಮಿಷನರ್ ಆಗಿದ್ದ ಹಬೀಬ್ ಇಬ್ರಾಹಿಂ ರಹೀಮ ತುಲ್ಲಾರ ಹೆಸರಿನಲ್ಲಿ 1948ರಲ್ಲಿ 10,07,940 ಪೌಂಡ್ (ಈಗಿನ ಮೌಲ್ಯ ರು. 9.39 ಕೋಟಿ) ಅನ್ನು ವೆಸ್ಟ್ ಮಿನಿಸ್ಟರ್ ಬ್ಯಾಂಕ್‍ಗೆ ವರ್ಗಾಯಿಸಲಾಗಿತ್ತು. 1948ರ ಸೆ. 18ರಂದು ಭಾರತವು ಹೈದ್ರಾಬಾದನ್ನು ತನ್ನ ವಶಕ್ಕೆ ಪಡೆಯಿತು. ಈ ಹಣ ರಹಿಮುತುಲ್ಲಾರ ಖಾತೆಗೆ ಏಜೆಂಟ್ ಮೂಲಕ ವರ್ಗಾವಣೆಯಾಗಿದ್ದು ಸೆಂ.20, 1948ರಂದು. 27 ರಂದು ನಿಜಾಮನು ಬ್ಯಾಂಕಿಗೆ ಈ ಹಣದ ವರ್ಗಾವಣೆ ತನ್ನ ಸಮ್ಮತಿ ಇಲ್ಲದೆ ನಡೆದಿದೆ. ಅದನ್ನು ಹಿಂತಿರುಗಿಸಬೇಕು ಎಂದು ಕೋರಿಕೆ ಸಲ್ಲಿಸಿದನು. ಆದರೆ ಬ್ಯಾಂಕ್ ಅದನ್ನು ಒಪ್ಪಲಿಲ್ಲ, ಖಾತೆದಾರರ ಒಪ್ಪಿಗೆ ಅದಕ್ಕೆ ಬೇಕಾಗಿತ್ತು. ಇದು ಸಿಗದೆ ವರ್ಷಗಳು ಉರುಳಿದವು. ಈ ಹಣದ ಮೇಲೆ ಭಾರತ ಸರ್ಕಾರ ಮತ್ತು ನಿಜಾಂನ ಉತ್ತರಾಧಿಕಾರಿಗಳು ಹಕ್ಕು ಸಾಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ