ಸುಪ್ರೀಂ ಕೋರ್ಟ್ 
ದೇಶ

ಎನ್‍ಜೆಎಸಿ ಹೇಗೆ ಕೆಲಸ ಮಾಡುತ್ತೆ: ಸುಪ್ರೀಂ ಪ್ರಶ್ನೆ

ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ(ಎನ್‍ಜೆಎಸಿ) ನ್ಯಾಯಾಂಗದ ಕಾರ್ಯ ನಿರ್ವಹಣೆಯನ್ನು ಹೇಗೆ ಅರ್ಥ ಪೂರ್ಣ ಹಾಗೂ ಉತ್ತರದಾಯಿಯನ್ನಾಗಿ ಮಾಡುತ್ತದೆ...

ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ(ಎನ್‍ಜೆಎಸಿ) ನ್ಯಾಯಾಂಗದ ಕಾರ್ಯ ನಿರ್ವಹಣೆಯನ್ನು ಹೇಗೆ ಅರ್ಥ ಪೂರ್ಣ ಹಾಗೂ ಉತ್ತರದಾಯಿಯನ್ನಾಗಿ ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಕೊಲಿಜಿಯಂ ವ್ಯವಸ್ಥೆ ಕೊಲಿಜಿಯಂ (ನ್ಯಾಯ ಮೂರ್ತಿಗಳ ನೇಮಕದ ಉನ್ನತ ಸಮಿತಿ) ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಸಾಕಷ್ಟು ಅವಕಾಶಗಳಿತ್ತು. ಒಂದು ವೇಳೆ ಆ ವ್ಯವಸ್ಥೆ ಪಾರದರ್ಶಕವಾಗಿರಲಿಲ್ಲ ಎನ್ನುವುದಾದರೆ ಈ ವ್ಯವಸ್ಥೆ ಮೂಲಕ ಎಷ್ಟು ಮಂದಿ ಕಳಂಕಿತರನ್ನು ನ್ಯಾಯ ಮೂರ್ತಿಗಳನ್ನಾಗಿ ನೇಮಿಸಲಾಗಿದೆ ಎನ್ನುವ ಪಟ್ಟಿ ಕೊಡಿ ಎಂದೂ ನ್ಯಾಯಾಲಯ ಸರ್ಕಾರವನ್ನು ಕೇಳಿದೆ.

ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದ ರ್ಶಕತೆಯೇ ಇರಲಿಲ್ಲ ಎಂದು ಹೇಳುವ ಹಾಗಿಲ್ಲ. ನಾವು ಹುದ್ದೆ ಖಾಲಿ ಇಧೆ ಎಂದು ಜಾಹೀರಾತು ನೀಡಲ್ಲ. ಹಾಗೆಂದ ಮಾತ್ರಕ್ಕೆ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದರ್ಥವಲ್ಲ. ವ್ಯವಸ್ಥೆಯ ವ್ಯಾಪ್ತಿ ಸೀಮಿತವಾಗಿತ್ತು. ಆದರೆ, ಸಾಕಷ್ಟು ಪಾರದರ್ಶಕತೆ ಇತ್ತು ಎಂದು ನ್ಯಾ.ಜೆ.ಎಸ್ ಖೆಹರ್ ನೇತೃತ್ವದ ಸಂವಿಧಾನ ಪೀಠ ಹೇಳಿದೆ.

ಕೊಲಿಜಿಯಂ ಮುಚ್ಚಿದ ಬಾಗಿಲ ವ್ಯವಸ್ಥೆಯಲ್ಲ. ಆದರೆ, ಇದರ ಬಾಗಿಲು ಮುಕ್ತಗೊಳಿಸಿದರೆ ಸಣ್ಣ ಸಣ್ಣದಕ್ಕೂ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಇಷ್ಟಾದರೂ ಇಡೀ ವ್ಯವಸ್ಥೆ ಪಾರದರ್ಶಕವಾಗಿರಲಿಲ್ಲ ಎಂದು ಹೇಳುವಂತಿಲ್ಲ. ಅಲ್ಲೊಂದು ಇಲ್ಲೊಂದು ಸಣ್ಣಪುಟಟ್ಟ ತಪ್ಪುಗಳಾಗಿವೆ ಎಂದಾಕ್ಷಣ ಇಡೀ ವ್ಯವಸ್ಥೆಯೇ ಸರಿಯಿಲ್ಲ ಎನ್ನುವುದು ಸರಿಯಲ್ಲ.

ಸರ್ಕಾರ ಎಷ್ಟು ಬಾರಿ ಕೊಲಿಜಿಯಂ ಮೂಲಕ ನೇಮಕಗೊಂಡ ವ್ಯಕ್ತಿಯ ಸಮಗ್ರತೆ ಕುರಿತು ಪ್ರಶ್ನೆ ಎತ್ತಿದೆ? ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಷ್ಟು ಹೆಸರನ್ನು ಸಮಗ್ರತೆಯ ವಿಚಾರ ಇಟ್ಟುಕೊಂಡು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ? ಸುಪ್ರೀಂ ಶಿಫಾರಸು ಮಾಡಿದ ಎಷ್ಟು ಹೆಸರನ್ನು ಸರ್ಕಾರ ಆ ವ್ಯಕ್ತಿಯ ಸಮಗ್ರಕತೆಯನ್ನು ಪ್ರಶ್ನಿಸಿ ವಾಪಸ್ ಕಳುಹಿಸಿಕೊಟ್ಟಿದೆ?

ಅದರಲ್ಲಿ ಎಷ್ಟು ಹೆಸರನ್ನು ಸುಪ್ರೀಂ ಕೋರ್ಟ್ ಮರು ಕಳುಹಿಸಿಕೊಟ್ಟಿದೆ? ಈ ಕುರಿತ ಪಟ್ಟಿ ಕೊಡಿ ಎಂದು ಕೋರ್ಟ್ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅರಿಗೆ ಕೋರ್ಟ್ ಸೂಚಿಸಿದೆ. ಕೊಲಿಜಿಯಂ ವ್ಯವಸ್ಥೆ ಜಾಗದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ನ್ಯಾಯಂಗ ನೇಮಕಗಳ ಆಯೋಗವನ್ನು ಸ್ಥಾಪಿಸಲು ನಿರ್ಧರಿಸಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಗುರುವಾರ ಹಾಗೂ ಶುಕ್ರವಾರ ಈ ಪ್ರಶ್ನೆಗಳನ್ನೆತ್ತಿದೆ.


ಈ ಮಧ್ಯೆ, ಎನ್ ಜೆಎಸಿ ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಎಂ.ಎಲ್ ಶರ್ಮಾ ಅವರಿಗೆ ಪೀಠ ಸೋಕಾಸ್ ನೋಟಿಸ್ ನೀಡಿದೆ. ದೂರುವ ಭರದಲ್ಲಿ ಹೇಗೆ ಬೇಕೋ ಹಾಗೆ ಬಯ್ಯಬಹುದು ಎಂದರ್ಥವಲ್ಲ. ಸರಿಯಾಗಿ ಮಾತನಾಡಿ ಎಂದು ಸೂಚಿಸಿದೆ. ಅಲ್ಲದೆ ಇನ್ನೊಂದು ವಾರದೊಳಗೆ ನೋಟಿಸ್ ಗೆ ಉತ್ತರಿಸುವಂತೆ ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT