ರಾಹುಲ್ ಗಾಂಧಿ 
ದೇಶ

ಮೊಬೈಲ್ ನೋಡಿ ಸಂತಾಪ ಬರೆದ ರಾಹುಲ್!

ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.

ನವದೆಹಲಿ: ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ  ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.  ಅವರು ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿ ಭೂಕಂಪದ ಸಂತ್ರಸ್ತರಿಗೆ  ಗೌರವ ಸಲ್ಲಿಸಿದ್ರು. ಆದರೆ  ಈ ವೇಳೆ ಸಂತಾಪ ಸೂಚನಾ ಸಂದೇಶ ಬರೆಯುವ ವೇಳೆ ಮೊಬೈಲ್ ನಲ್ಲಿದ್ದ,  ಬರಹವನ್ನು ನಕಲು ಮಾಡಿದ್ದು ಭಾರಿ ವಿವಾದಕ್ಕೆ  ಎಡೆಮಾಡಿಕೊಟ್ಟಿದೆ. ರಾಹುಲ್ ಅವರು ವಿಸಿಟರ್ಸ್ ಬುಕ್ ನಲ್ಲಿ ಬರೆಯಲು ಕೂತಾಗಲೇ ಮಾಧ್ಯಮಗಳು ಕ್ಯಾಮೆರಾಗಳು ಅವರು ಮೊಬೈಲ್ ನೋಡಿ, ನಕಲು ಮಾಡುತ್ತಿರುವುದನ್ನು ಸೆರೆ ಹಿಡಿದವೆ. ಈ ಘಟನೆಯು ಟ್ವೀಟರ್ ನಲ್ಲೂ ಪಪ್ಪು ಕಾಂಟ್ ರೈಟ್ ಸಾಲ ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿತು.
ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿದ್ದ ರಾಹುಲ್ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ್ ಅವರನ್ನು ಭೇಟಿಯಾಗಿದ್ದರು. ಕಳೆದ ವಾರ ವಿಶ್ವವು ನೇಪಾಳದಲ್ಲಿ ನಡೆದ ಭಯಾನಕ ದುರಂತವನ್ನು ಗಮನಿಸಿದೆ. ಕೆಲವು ಗಾಯಗಳು ಯಾವತ್ತೂ ಮಾಸಲ್ಲ. ಆದರೆ ನೇಪಾಳ ಕಷ್ಟಪಟ್ಟು ಮತ್ತೆ ದೇಶವನ್ನು ಕಟ್ಟುತ್ತಿದೆ. ಭಾರತದ ಜನತೆ ನಿಮ್ಮೊಂದಿಗೆ ಶಕ್ತಿ  ಮತ್ತು ಐಕ್ಯತೆಯಲ್ಲಿ ಸಾಥ್ ನೀಡಲಿದೆ. ಎಂದು ಅವರು ಸಂತಾಪ ಸೂಚನೆ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!