ಡಿಐಜಿ ಸುನಿಲ್ ಪರಸ್ಕರ್ 
ದೇಶ

ಮಹಿಳೆ ಮೇಲೆ ಅತ್ಯಾಚಾರ: ಮಹಾ ಡಿಐಜಿ ಬಂಧನ ಸಾಧ್ಯತೆ

ಅತ್ಯಾಚಾರ ಆರೋಪದಡಿ ಇತ್ತೀಚೆಗಷ್ಟೇ ಸೇವೆಯಿಂದ ಅಮಾನತುಗೊಂಡಿರುವ ಮಹಾರಾಷ್ಟ್ರದ ಡಿಐಜಿ ಸುನಿಲ್ ಪರಸ್ಕರ್ ಅವರನ್ನು ಗುರುವಾರ...

ಮುಂಬೈ: ಅತ್ಯಾಚಾರ ಆರೋಪದಡಿ ಇತ್ತೀಚೆಗಷ್ಟೇ ಸೇವೆಯಿಂದ ಅಮಾನತುಗೊಂಡಿರುವ ಮಹಾರಾಷ್ಟ್ರದ ಡಿಐಜಿ ಸುನಿಲ್ ಪರಸ್ಕರ್ ಅವರನ್ನು ಗುರುವಾರ ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಶುಕ್ರವಾರ ಮುಂಬೈನ ಅಪರಾಧ ವಿಭಾಗದ ಪೊಲೀಸರು ಸುನಿಲ್ ಪರಸ್ಕರ್ ವಿರುದ್ಧ ವಿಶೇಷ ಮಹಿಳಾ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಸೋಮವಾರ ಸುನಿಲ್ ಪರಸ್ಕರ್‌ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಪ್ರಸ್ತುತ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ನಾಳೆ ಮುಂಬೈ ಸಿಸಿಬಿ ಪೊಲೀಸರು ಅವರನ್ನು ಬಂಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮನ್ನು ಪೊಲೀಸರು ಬಂಧಿಸಬಹುದೆಂಬ ಕಾರಣಕ್ಕಾಗಿ ಪರಸ್ಕರ್ ಅವರು ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದರೆ ನಾಳೆ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಸುನಿಲ್ ಪರಸ್ಕರ್ ಅವರ ಜಾಮೀನು ಅರ್ಜಿ ನ್ಯಾಯಾಲಯದಲ್ಲಿದ್ದು, ಒಂದು ವೇಳೆ ವಿಚಾರಣೆಗೆ ಅವರು ಗೈರು ಹಾಜರಾದರೆ ನಾಳೆ ಸಂಜೆಯೊಳಗೆ ಅವರನ್ನು ಬಂಧಿಸಲಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಉಪ ಪೊಲೀಸ್ ಆಯುಕ್ತ ಅತುಲ್‌ಚಂದ್ರ ಕುಲಕರ್ಣಿ ತಿಳಿಸಿದ್ದಾರೆ. ಅಲ್ಲದೆ ಸುನಿಲ್ ಪರಸ್ಕರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಂಧಿಸಲು ಸಾಧ್ಯವಾಗಿಲ್ಲ. ನಾಳೆಯೊಳಗೆ ಅವರು ಗುಣಮುಖರಾಗುವ ಸಾಧ್ಯತೆಯಿರುವುದರಿಂದ ನಾಳೆ ಅವರು ಬಂಧನಕ್ಕೊಳಗಾಗಬಹುದು ಎಂದು ಹೇಳಿದ್ದಾರೆ.

ಏನಿದು ಪ್ರಕರಣ..?
ಡಿಐಜಿ ಸುನಿಲ್ ಪರಸ್ಕರ್ ಅವರು ತಮ್ಮ ಬಂಗಲೆಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಅನಾಮಧೇಯ ಮಹಿಳೆಯೊಬ್ಬಳು ದೂರು ನೀಡಿದ್ದರು. 2013ರ ನವೆಂಬರ್‌ನಲ್ಲಿ ಮಹಿಳೆ ಆರೋಪದಲ್ಲಿ ಉಲ್ಲೇಖಿಸಿರುವ ಅದೇ ಬಂಗಲೆಯಲ್ಲಿ ಮಹಿಳೆ ಜತೆ ಪರಸ್ಕರ್ ಇದ್ದರು ಎಂದು ಸಾರ್ವಜನಿಕರೊಬ್ಬರು ಸಾಕ್ಷಿ ಹೇಳಿದ್ದರು. ನವೀ ಮುಂಬೈನಲ್ಲಿರುವ ಫ್ಲಾಟ್‌ನಲ್ಲಿ ಪರಸ್ಕರ್ ತನ್ನನ್ನು ಅತ್ಯಾಚಾರ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಇದು ದಾಖಲಾಗಿದೆ ಎಂದು ನೊಂದ ಮಹಿಳೆ ದೂರು ನೀಡಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

ವಿರೋಶ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ, ಆಶಿಕಾ

SCROLL FOR NEXT