ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ, ಪಾಕಿಸ್ತಾನದಲ್ಲಿ: ಲೇಖಕ ಖುರೇಶಿ ವಿವಾದಾತ್ಮಕ ಹೇಳಿಕೆ

ಮರ್ಯಾದಾ ಪುರುಷ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಅಲ್ವಂತೆ. ಶ್ರೀರಾಮ ಜನ್ಮ ಭೂಮಿ ಇರುವುದು ಪಾಕಿಸ್ತಾನದಲ್ಲಂತೆ...

ಬಾಬರಿ ಮಸೀದಿ
Shilpa D
Updated On : 6 May 2015, 4:54 am

ಮರ್ಯಾದಾ ಪುರುಷ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಅಲ್ವಂತೆ. ಶ್ರೀರಾಮ ಜನ್ಮ ಭೂಮಿ ಇರುವುದು ಪಾಕಿಸ್ತಾನದಲ್ಲಂತೆ. ಹೀಗಂತ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಸದಸ್ಯ ಅಬ್ದುಲ್ ರಹೀಂ ಖುರೇಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್ ನ ಉರ್ದು ಮಸ್ಕಾನ್ ನಲ್ಲಿ ತಮ್ಮ ಅಯೋಧ್ಯೆ ಕಾ ತನಾಜ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಶ್ರೀರಾಮ ಹುಟ್ಟಿದ್ದು ಪಾಕಿಸ್ತಾನದ ರಾಮ್ ದೇರಿಯಲ್ಲಿ. ಪಾಕಿಸ್ತಾನ  ಭಾರತ ಇಬ್ಭಾಗವಾದ ನಂತರ ರಾಮ್ ದೇರಿಯ ಹೆಸರು ರೆಹಮಾನ್ ದೇರಿ ಆಗಿ ಬದಲಾಯಿತು ಎಂದಿದ್ದಾರೆ.
ನಿಜವಾದ ರಾಮಜನ್ಮ ಭೂಮಿ ಇರುವುದು ಪಾಕಿಸ್ತಾನದಲ್ಲೇ ಹೊರತು ಅಯೋಧ್ಯೆಯಲ್ಲಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ಶ್ರೀರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದೇ ಆದರೆ ಅಲ್ಲಿ ಯಾವುದಾದರೂ  ಕುರುಹುಗಳಿರಬೇಕಿತ್ತು. ಅಯೋಧ್ಯೆಯಲ್ಲಿ ಆ ರೀತಿಯ ಯಾವುದೇ ಕುರುಹುಗಳಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments