ನರೇಂದ್ರ ಮೋದಿ 
ದೇಶ

ದಂತೆವಾಡಕ್ಕೆ ಪ್ರಧಾನಿ ಭೇಟಿ: ನಕ್ಸಲರಿಂದ ರೈಲ್ವೆ ಮಾರ್ಗ ಸ್ಫೋಟ, 500 ಗ್ರಾಮಸ್ಥರ ಒತ್ತೆ

ಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಪೀಡಿತ ಪ್ರದೇಶ ದಂತೆವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು,...

ರಾಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಪೀಡಿತ ಪ್ರದೇಶ ದಂತೆವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, 5 ಕಿ.ಮೀ. ರೈಲ್ವೆ ಮಾರ್ಗ ಸ್ಫೋಟಿಸಿದ್ದಾರೆ. ಮತ್ತೊಂದಡೆ 500 ಗ್ರಾಮಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

ದಂತೆವಾಡ ಜಿಲ್ಲೆಯ ಕಿರಂದೂಲ್ ಸಮೀಪ ಸುಮಾರು 5 ಕಿ.ಮೀ ರೈಲ್ವೆ ಮಾರ್ಗವನ್ನು ನಕ್ಸಲರು ಸ್ಫೋಟಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ರ್ಯಾಲಿಗೆ ತೆರಳುತ್ತಿದ್ದ ಸುಕ್ಮಾ ಜಿಲ್ಲೆಯ ಮರೇಂಗಾದ 500 ಗ್ರಾಮಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

ದಂತೆವಾಡಾದಲ್ಲಿ ವಿವಿಧ ಅಭಿೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಛತ್ತೀಸ್ ಗಢಕ್ಕೆ ಭೇಟಿ ನೀಡಿದ್ದು, ಕಾರ್ಯಕ್ರಮಕ್ಕೆ ಆಗಮಸುತ್ತಿದ್ದ 500ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಮೋದಿ ಅವರು ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್‌ಘಾಟ್‌-ಜಗದಲ್‌ಪುರ ರೈಲ್ವೆ ಮಾರ್ಗದ ಎರಡನೇ ಹಂತವನ್ನೂ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video