ದೇಶ

ತಾಜ್‍ಮಹಲ್ ಸುರಕ್ಷಿತ ಭಾರತೀಯ ಪುರಾತತ್ವ ಇಲಾಖೆ

Rashmi Kasaragodu

ಕಠ್ಮಂಡು: ನೇಪಾಳದಲ್ಲಾದ 7.9 ಪ್ರಮಾಣದ ಭೂಕಂಪದಿಂದ ತಾಜ್ ಮಹಲ್ ಹಾಗೂ ಅದರಲ್ಲಿರುವ ಯಾವ ಸ್ಮಾರಕಗಳಿಗೂ ಹಾನಿಯಾಗಿಲ್ಲ ಎಂದು ಭಾರತದ ಪುರಾತತ್ವ ಇಲಾಖೆ(ಎಎಸ್‍ಐ) ಘೋಷಿಸಿದೆ. `ಏ.25ರಂದು ನೇಪಾಳ ದಲ್ಲಿ ಭೀಕರ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಉತ್ತರ ಭಾರತದ ಸ್ಮಾರಕಗಳ ಸ್ಥಿತಿಯನ್ನು ಪರಿಶೀಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಪರಿಶೀಲನೆ ನಡೆಸಿದ್ದು ಎಲ್ಲ ಸ್ಮಾರಕಗಳು ಸುರಕ್ಷಿತವಾಗಿರುವ ಬಗ್ಗೆ ವರದಿ ನೀಡಿದ್ದಾರೆ'  ಎಂದು ಎಎಸ್‍ಐ ಮಹಾ ನಿರ್ದೇಶಕ ರಾಕೇಶ್ ತಿವಾರಿ ತಿಳಿಸಿದ್ದಾರೆ.
ನೇಪಾಳದಲ್ಲಿ ಮತ್ತೆ ಕಂಪನ: ಶುಕ್ರವಾರದಂದು ನೇಪಾಳದಲ್ಲಿ ಮತ್ತೆರೆಡು ಬಾರಿ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಸಿಂಧುಪಾಲ್‍ಚೌಕ್‍ನಲ್ಲಿ ಮುಂಜಾನೆ 2.19ರ ಸುಮಾರಿಗೆ 4 ಪ್ರಮಾಣದ ಭೂಕಂಪನ ಸಂಭವಿಸಿದ್ದರೆ, ಡೋಲಕ ಜಿಲ್ಲೆಯಲ್ಲಿ 6.17 ತೀವ್ರತೆಯ ಕಂಪನ ದಾಖಲಾಗಿದೆ. ಇಲ್ಲಿಯವರೆಗೆ ಸುಮಾರು 8,000 ಮಂದಿ ಸಾವನ್ನಪ್ಪಿ ರುವುದು ವರದಿಯಾಗಿದೆ. ಯಾವುದೇ ಸಾವುನೋವು ವರದಿಯಾಗಿಲ್ಲ. ಏ.25ರಂದು ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ನೇಪಾಳದಲ್ಲಿ 150 ಬಾರಿ ಮರುಕಂಪನಗಳು ದಾಖಲಾಗಿವೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 7,885 ಹಾಗೂ ಗಾಯಗೊಂಡವರ ಸಂಖ್ಯೆ 16,390 ಆಗಿದೆ.

SCROLL FOR NEXT