ಅತ್ಯಾಚಾರಕ್ಕೆ ವಿರೋಧ: ಅತ್ಯಾಚಾರಿಯಿಂದ 2 ಮಕ್ಕಳ ಸಜೀವ ದಹನ
ತನ್ನ ಅತ್ಯಾಚಾರ ಯತ್ನಕ್ಕೆ ಮಹಿಳೆಯೊಬ್ಬಳು ತೀವ್ರ ಪ್ರತಿರೋಧ ಒಡ್ಡಿದ ಪರಿಣಾಮ ಕಾಮುಕನೊಬ್ಬ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ...
ರಾಯ್ಪುರ: ತನ್ನ ಅತ್ಯಾಚಾರ ಯತ್ನಕ್ಕೆ ಮಹಿಳೆಯೊಬ್ಬಳು ತೀವ್ರ ಪ್ರತಿರೋಧ ಒಡ್ಡಿದ ಪರಿಣಾಮ ಕಾಮುಕನೊಬ್ಬ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದು ತನ್ನ ಕೋಪ ತೀರಿಸಿಕೊಂಡ ಪ್ರಕರಣ ಛತ್ತೀಸ್ಗಡದಲ್ಲಿ ವರದಿಯಾಗಿದೆ.
ನಿನ್ನೆ ಇಲ್ಲಿನ ದುರ್ಗ ತಾಲ್ಲೂಕಿನಲ್ಲಿರುವ ಘುಸಿದಿಹ್ ಗ್ರಾಮದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಮಹಾವೀರ್ ಎಂಬ ಆರೋಪಿ ಆಕೆ ಪ್ರತಿರೋಧ ಒಡ್ಡಿದ್ದಕ್ಕೆ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ ಮೋಹನ್ (3), ಭುವನೇಶ್ವರಿ (6) ಎಂಬ ಮಕ್ಕಳನ್ನು ಕಾಮುಕ ಬೆಂಕಿ ಹಚ್ಚಿ ಕೊಂದಿದ್ದು, ಕಿರುಕುಳಕ್ಕೊಳಗಾದ ಮಹಿಳೆ ಆ ಮಕ್ಕಳಿಗೆ ಚಿಕ್ಕಮ್ಮ ಎಂದು ತಿಳಿದುಬಂದಿದೆ.
ಆರೋಪಿ ಕೂಡ ಅದೇ ಗ್ರಾಮದ ನಿವಾಸಿಯಾಗಿದ್ದು, ನಿನ್ನೆ ಮಧ್ಯಾಹ್ನ ಮನೆಗೆ ನುಗ್ಗಿ ಚಿಕ್ಕಮ್ಮನ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಾನೆ. ತನ್ನ ಪ್ರಯತ್ನ ವಿಫಲವಾದಾಗ ಕಾಮುಕ, ಮಕ್ಕಳ ಮೇಲೆ ಸೇಡು ತೀರಿಸಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.