ದೇಶ

ದೆಹಲಿ ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಗ್ಯಾಮ್ಲಿನ್

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸೂಚನೆಯನ್ನು ದಿಕ್ಕರಿಸಿ ಶಕುಂತಲಾ ಗ್ಯಾಮ್ಲಿನ್ ಅವರು ದೆಹಲಿ ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ದೆಹಲಿಯ ಹಂಗಾಮಿ ಮುಖ್ಯ ಕಾರ್ಯದರ್ಶಿ ಹುದ್ದೆ ನೇಮಕಾತಿ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಕಾಳಗ ತಾರಕಕ್ಕೇರಿತ್ತು. ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶಕುಂತಲಾ ಗ್ಯಾಮ್ಲಿನ್ ಅವರಿಗೆ ಅಧಿಕಾರ ವಹಿಸಿಕೊಳ್ಳದಂತೆ ದೆಹಲಿ ಸಿಎಂ ಸೂಚಿಸಿದ್ದರು.

ಈ ಸಂಬಂಧ ಗ್ಯಾಮ್ಲಿನ್ ಅವರಿಗೆ ಪತ್ರ ಬರೆದಿದ್ದ ದೆಹಲಿ ಸಿಎಂ, ನಿಮ್ಮ ನೇಮಕ ಅಸಂವಿಧಾನಕವಾಗಿದ್ದು, ಅಧಿಕಾರ ವಹಿಸಿಕೊಳ್ಳದಂತೆ ಸೂಚಿಸಿದ್ದರು.

ಕೆ ಕೆ ಶರ್ಮ, ಈ ಅತ್ಯುನ್ನತ ಅಧಿಕಾರಶಾಹಿ ಹುದ್ದೆಯನ್ನು ತೊರೆದ ಮೇಲೆ ಅವರ ನಂತರದ ಹಿರಿಯ ಅಧಿಕಾರಿ ಗ್ಯಾಮ್ಲಿನ್ ಅವರನ್ನು ಜಂಗ್ ನೇಮಕ ಮಾಡಿದ್ದರು. ಇದು ದೆಹಲಿ ಸರ್ಕಾರಕ್ಕೆ ಇರುಸುಮುರುಸು ಉಂಟು ಮಾಡಿತ್ತು.

SCROLL FOR NEXT