ನರೇಂದ್ರ ಮೋದಿ 
ದೇಶ

ಹೆಚ್ಚು ಕೆಲಸ ಮಾಡುವುದು ಅಪರಾಧವೆಂದರೂ ಸರಿ, ನಾನು ಮಾಡುತ್ತೇನೆ: ಮೋದಿ

ವಿದೇಶ ಪ್ರವಾಸದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಕಡೆಗೂ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ವಿಶ್ರಾಂತಿ ರಹಿತ ಕೆಲಸವನ್ನು ಟೀಕಿಸಲಾಗುತ್ತಿದೆ.

ಶಾಂಘೈ: ವಿದೇಶ ಪ್ರವಾಸದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಕಡೆಗೂ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ವಿಶ್ರಾಂತಿ ರಹಿತ ಕೆಲಸವನ್ನು ಟೀಕಿಸಲಾಗುತ್ತಿದೆ. ಒಂದು ವೇಳೆ ಅತಿ ಹೆಚ್ಚು ಕೆಲಸ ಮಾಡುವುದು ಅಪರಾಧವಾದರೂ ಸರಿ, ನಾನು ಮಾತ್ರ ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ.

ಇಂದು ಶಾಂಘೈನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಮೋದಿ ಯಾಕೆ ಇಷ್ಟೊಂದು ದೇಶಗಳಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ' ಎಂದು ಜನ ಕೇಳುತ್ತಿದ್ದಾರೆ. ನೀವು ಕಡಿಮೆ ಕೆಲಸ ಮಾಡಿದರು, ಮಲಗಿದರು ಟೀಕೆ ಸಾಮಾನ್ಯ. ಆದರೆ ಹೆಚ್ಚು ಕೆಲಸ ಮಾಡುವುದನ್ನು ಟೀಕಿಸುತ್ತಿರುವುದು ನನ್ನ ದುರದೃಷ್ಟ ಎಂದರು.

ಹೆಚ್ಚು ಕೆಲಸ ಮಾಡುವುದು ಅಪರಾಧವೆಂದರೂ ಪರವಾಗಿಲ್ಲ. ದೇಶದ ಜನತೆಗಾಗಿ ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಪ್ರಧಾನಿ ಹೇಳಿದರು.

ನಾಳೆ ನಾನು ಮುಂಗೋಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ನಾಳೆ ಭಾನುವಾರ ನಿಮಗೆಲ್ಲ ರಜೆ. ಆದರೆ ನನಗೆ ಭಾನುವಾರ ಸೇರಿದಂತೆ ಯಾವುದೇ ದಿನ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದೇನೆ. ನಾಳೆ ಭಾನುವಾರವಾದರೂ ಮುಂಗೋಲಿಯಾ ಸಂಸತ್ ಸಭೆ ಕರೆದಿದ್ದಾರೆ. ನಾನು ಕಳೆದ ಒಂದು ವರ್ಷದಿಂದ ರಜೆ ಪಡೆಯದೇ ಕೆಲಸ ಮಾಡುತ್ತಿದ್ದೇನೆ. ಇದು ನಾನು ನನ್ನ ಜನರಿಗೋಸ್ಕರ ಮಾಡುತ್ತಿರುವ ಸೇವೆಯಾಗಿದೆ ಎಂದು ಮೋದಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!