ಅರುಣಾ ಶಾನಭಾಗ್ 
ದೇಶ

ಅತ್ಯಾಚಾರ ಸಂತ್ರಸ್ತೆ ನರ್ಸ್ ಅರುಣಾ ಶಾನಭಾಗ್ ಸ್ಥಿತಿ ಗಂಭೀರ, ವೆಂಟಿಲೆಟರ್ ಅವಳಡಿಕೆ

ಕಳೆದ 42 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನಭಾಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು...

ಮುಂಬೈ: ಕಳೆದ 42 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನಭಾಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೆಟರ್ ಅಳವಡಿಸಲಾಗಿದೆ.

ಅತ್ಯಾಚಾರಕ್ಕೊಳಗಾಗಿ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಕೋಣೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನಭಾಗ(68) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ತೀವ್ರ ನಿಗಾ ಘಟಕಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮುಂಬೈನಲ್ಲಿ ನರ್ಸ್ ಆಗಿದ್ದ ಅರುಣಾ ಶಾನಭಾಗ್ ಅವರನ್ನು ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಆಗಿದ್ದ ಸೋಹನ್ ಲಾಲ್ ಭಟ್ರಾ ವಾಲ್ಮಿಕಿ ಎಂಬಾತ ಆಕೆಯನ್ನು 1973ರಲ್ಲಿ ಭೀಕರವಾಗಿ ಅತ್ಯಾಚಾರಿಸಿದ್ದ ಈ ಘಟನೆಯ ಬಳಿಕ ಅರುಣಾ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಸತತ 42 ವರ್ಷಗಳಿಂದ ಜೀವಚ್ಛವವಾಗಿ ಹಾಸಿಗೆಯಲ್ಲಿ ಮಲಗಿದ್ದಾರೆ. ಈ ದುಷ್ಕೃತ್ಯಕ್ಕೆ ಕಾರಣನಾದ ವಾಲ್ಮಿಕಿಯನ್ನು ಅದೇ ಆಸ್ಪತ್ರೆಯಲ್ಲಿ ನಾಯಿ ಚೈನಿನಿಂದ ನಿಯಂತ್ರಿಸಲಾಗಿದೆ.

ಜೀವಚ್ಛವವಾಗಿ ಮಲಗಿರುವ ಅರುಣಾ ಶಾನಭಾಗ್ ಅವರಿಗೆ ದಯಾಮರಣ ಕರುಣಿಸಬೇಕು ಎಂದು ಪತ್ರಕರ್ತೆ ಪಿಂಕಿ ವಿನಾನಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ 2011ರಲ್ಲಿ ಸುಪ್ರೀಂಕೋರ್ಟ್ ದಯಾಮರಣ ಅರ್ಜಿಯನ್ನು ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT