ದೇಶ

ಧಾರ್ಮಿಕತೆಯನ್ನು ಬದಿಗೊತ್ತಿ ಬಾಲಕನ ಜೀವ ಉಳಿಸಿದ ಹರ್ಮನ್ ಸಿಂಗ್

Vishwanath S

ಆಕ್‌ಲ್ಯಾಂಡ್: ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಶಾಲಾ ಬಾಲಕನ ರಕ್ಷಣೆಗಾಗಿ 22 ವರ್ಷದ ಸಿಖ್ ಯುವಕನೊಬ್ಬ ತಲೆ ಮೇಲಿನ ಟರ್ಬನ್ ಬಿಚ್ಚಿ ಧಾರ್ಮಿಕ ಶಿಷ್ಟಾಚಾರ ಬದಿಗೊತ್ತಿ ಮಾನವೀಯತೆ ಮೇರಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಆಕ್ ಲ್ಯಾಂಡ್ ನ ತಮ್ಮ ಮನೆ ಬಳಿ ಹರ್ಮನ್ ಸಿಂಗ್ ನಿಂತಿದ್ದ ಸಂದರ್ಭ ಶಾಲೆಗೆ ತೆರಳುತ್ತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಕನಿಗೆ ರಕ್ತಸ್ರಾವವಾಗ ತೊಡಗಿದೆ. ಕೂಡಲೇ ಸ್ಥಳಕ್ಕೆ ಓಡಿಬಂದ ಹರ್ಮನ್ ಬಾಲಕನನ್ನ ರಕ್ಷಿಸಿದ್ದಾನೆ. ಯುವಕನ ಈ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಮನ್ ಸಿಂಗ್, ಈ ಸಂದರ್ಭದಲ್ಲಿ ನನಗೆ  ಟರ್ಬನ್ ತೆಗೆಯುವ ಬಗ್ಗೆ ಯಾವುದೇ ಗೊಂದಲವಿರಲಿಲ್ಲ, ಬಾಲಕನನ್ನ ರಕ್ಷಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ರಕ್ತಸ್ರಾವವನ್ನ ಆದಷ್ಟೂ ತಡೆಯಬೇಕಿತ್ತು. ಆ ಬಾಲಕನ ರಕ್ಷಣೆ ನನ್ನ ಹೊಣೆ’ ಎಂದು ಹರ್ಮನ್ ನುಡಿದಿದ್ದಾರೆ.

ಸಿಖ್ ಸಂಪ್ರದಾಯದಲ್ಲಿ ಟರ್ಬನ್ ಅನ್ನ ಎಲ್ಲೂ ತೆಗೆಯುವಂತಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಧಾರ್ಮಿಕ ಶಿಷ್ಟಾಚಾರ ಅಡ್ಡಿಬರುವುದಿಲ್ಲ ಅಂತಾರೆ ಹರ್ಮನ್. ಈ ಸಂದರ್ಭ ಹರ್ಮನ್ ಜೊತೆಯಲ್ಲಿದ್ದ ಧಿಲ್ಲೊನ್ ಘಟನೆಯ ಫೋಟೋಗಳನ್ನ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

SCROLL FOR NEXT