ಕಾಬೂಲ್: ಅತಿಥಿ ಗೃಹದ ಮೇಲೆ ಉಗ್ರರು ದಾಳಿ ನಡೆಸಿ ನಾಲ್ವರು ಭಾರತೀಯರನ್ನು ಬಲಿ ತೆಗೆದುಕೊಂಡ ಪ್ರಕರಣ ಮಾಸುವ ಮುನ್ನವೇ ಆಪ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿ ಮತ್ತೆ ಕಾರ್ ಸ್ಪೋಟಗೊಂಡಿದೆ.
ಆಪ್ಘಾನಿಸ್ತಾನದ ನ್ಯಾಟೋ ಮಿಲಿಟರಿ ಕೇಂದ್ರವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕಾಬೂಲ್ ಮುಖ್ಯ ವಿಮಾನ ನಿಲ್ದಾಣದ 200 ಮೀಟರ್ ದೂರದಲ್ಲಿ ಕಾರು ಸ್ಪೋಟಗೊಂಡಿದ್ದು ಯಾವುದೇ ಹಾನಿಯಾದ ವರದಿಯಾಗಿಲ್ಲ. ತಾಲಿಬಾನ್ ದಂಗೆಕೋರರು ನಡೆಸುತ್ತಿರುವ ದಾಳಿಗಳಲ್ಲಿ ಇದು ಒಂದು ಎಂದು ಶಂಕಿಸಲಾಗಿದೆ
ಟಯೋಟಾ ಕರೋಲಾ ಕಾರಿನಲ್ಲಿ ಬಂದ ಆತ್ಮಾಹುತಿ ಬಾಂಬರ್ ಗಳು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಕಾಬೂಲ್ ಪೊಲೀಸರು ತಿಳಿಸಿದ್ದಾರೆ. ಆದರೆ ಇದುವರೆಗೂ ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲ.