ಬಾಬುಲಾಲ್ ಗೌರ್ 
ದೇಶ

ಧೋತಿ ಬಿಚ್ಚುವುದು ಹೇಗೆ ಅಂತ ಹೇಳಿ ಕೊಡುತ್ತಾರಂತೆ ಈ ಸಚಿವ!

ರಷ್ಯಾದ ನಾಯಕನ ಹೆಂಡತಿಗೆ ಧೋತಿ ಬಿಚ್ಚುವುದು ಹೇಗೆ ಎಂಬುದನ್ನು ನಾನು ಹೇಳಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ...

ಭೋಪಾಲ್: ರಷ್ಯಾದ ನಾಯಕನ ಹೆಂಡತಿಗೆ ಧೋತಿ ಬಿಚ್ಚುವುದು ಹೇಗೆ ಎಂಬುದನ್ನು ನಾನು ಹೇಳಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ ಹೊಸತೊಂದು ವಿವಾದ ಸೃಷ್ಟಿಸಿದ್ದಾರೆ.

ಭಾನುವಾರ ಪಕ್ಷದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಗೌರ್, ಅಂದೊಮ್ಮೆ ನಾನು ರಷ್ಯಾ ನಾಯಕರ ಪತ್ನಿಯಲ್ಲಿ ಧೋತಿ ಬಿಚ್ಚುವುದು ಹೇಗೆ ಎಂಬುದಾಗಿ ಹೇಳಿಕೊಡುತ್ತೇನೆ ಎಂದು ಹೇಳಿದ್ದೆ ಎಂದಿದ್ದಾರೆ.

ಗೌರ್ ಅವರ ಮಾತು ಕೇಳಿ ಸಮ್ಮೇಳನದಲ್ಲಿದ್ದವರಿಗೆ, ಮಹಿಳೆಯರಿಗೆ ಇರಿಸುಮುರುಸುವುಂಟಾಗಿದೆ. ಈ ಸಮ್ಮೇಳನದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ನಂದಕುಮಾರ್ ಚೌಹಾಣ್ ಕೂಡಾ ಉಪಸ್ಥಿತರಿದ್ದರು.

ರಷ್ಯಾದ ನಾಯಕನ ಪತ್ನಿಗೆ ನಾನು ಧೋತಿ ಉಟ್ಟು ಹೇಗೆ ಕೆಲಸ ಮಾಡ್ತೀನಿ? ಧೋತಿಗೆ ಜಿಪ್ ಅಥವಾ ಬೆಲ್ಟ್ ಇದೆಯೇ ಎಂಬ ಕುತೂಹಲ ಇತ್ತು. ಅದಕ್ಕೆ ನಾನು ನಿಮಗೆ ಧೋತಿ ಉಡುವುದು ಹಾಗೂ ಬಿಚ್ಚುವುದು ಹೇಗೆ ಎಂಬುದನ್ನು ಹೇಳಿ ಕೊಡುತ್ತೇನೆ. ಆದರೆ ಈಗ ಅಲ್ಲ ಎಂದು ಹೇಳಿದ್ದೆ ಎಂದು 84 ರ ಗೌರ್ ಸಮ್ಮೇಳನದಲ್ಲಿ ತಮ್ಮ ಧೋತಿ ಮಹಾತ್ಮೆ ಹೇಳಿದ್ದರು.

ಗೌರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲೇನೂ ಅಲ್ಲ. ಒಂದ್ಸಾರಿ ರಷ್ಯಾದ ಮಹಿಳೆಯೊಬ್ಬರು ಗೌರ್ ಅವರ ಹಣೆಗೆ ಮುತ್ತುಕೊಟ್ಟಿದ್ದರು. ಆವಾಗ ಗೌರ್, ರಷ್ಯಾದ ಮಹಿಳೆಯರು ತುಂಬಾ ಆರೋಗ್ಯವಂತರು. ನನ್ನ ಹಣೆಗೆ ರಷ್ಯಾ ಮಹಿಳೆ ಮುತ್ತಿಕ್ಕುವ ಫೋಟೋ ನನ್ನ ಬಳಿ ಇದೆ. ಬಿಜೆಪಿ ಇಂಥವರಿಗೆ ಟಿಕೇಟು ಕೊಡಬೇಕಿತ್ತು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!