ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
ದೇಶ

ಅಧಿಸೂಚನೆ ಹೊರಡಿಸಿದ ಕಾರ್ಯದರ್ಶಿ ಕಚೇರಿಗೆ ಬೀಗ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ಸಮರ ತಾರಕಕ್ಕೇರಿದೆ. ಆದರೆ ಬಲಿಪಶು ಆಗಿರುವುದು ಮಾತ್ರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿ!...

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ಸಮರ ತಾರಕಕ್ಕೇರಿದೆ. ಆದರೆ ಬಲಿಪಶು ಆಗಿರುವುದು ಮಾತ್ರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿ!

ಸೋಮವಾರ ನಡೆದ ಅತ್ಯಂತ ಮುಜುಗರಕಾರಿ ಸನ್ನಿವೇಶವೊಂದರಲ್ಲಿ, ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಂದೋ ಮಜುಂದಾರ್ ಎಂದಿನಂತೆ ದೆಹಲಿಯ ತಮ್ಮ ಸೆಕ್ರೆಟರಿಯಟ್ ಕಟ್ಟಡದ ಏಳನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಹೋದರೆ, ತಮ್ಮ ಕೊಠಡಿಗೆ ಬೀಗ ಜಡಿದಿರುವುದನ್ನು ಕಂಡು ದಂಗಾಗಿದ್ದಾರೆ.

ಕೊಠಡಿಗೆ ಮಾತ್ರವಲ್ಲದೆ ಅವರ ಸುಪರ್ದಿಯ ಇಡೀ ಕಚೇರಿಗೇ ಬೀಗ ಹಾಕಲಾಗಿತ್ತು. ಘಟನೆಯ ಹಿನ್ನೆಲೆ: ದೆಹಲಿ ಸರ್ಕಾರದ ಒಪ್ಪಿಗೆ ಪಡೆಯದೆ ಐಎಎಸ್ ಅಧಿಕಾರಿ ಶಕುಂತಲಾ ಗಾಮ್ಲಿನ್ ಅವರನ್ನು ಪ್ರಭಾರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಜೀಬ್ ಜಂಗ್ ನೇಮಕ ಮಾಡಿದ್ದು ವಿವಾದವಾಗಿತ್ತು. ಕೇಜ್ರಿವಾಲ್ ಇದನ್ನು ಕಟುವಾಗಿ ವಿರೋಧಿಸಿ, ನೇಮಕವನ್ನು ಪ್ರಶ್ನಿಸಿದ್ದರು.

ನಜೀಬ್ ಜಂಗ್ ಕಳಿಸಿದ್ದ ನೇಮಕಾತಿ ಆದೇಶಕ್ಕೆ ಮಜುಂದಾರ್ ಸಹಿ ಹಾಕಿದ್ದು ಕೇಜ್ರಿವಾಲ್ ಕೆಂಗಣ್ಣಿಗೆ ಕಾರಣವಾಗಿತ್ತು. ಶನಿವಾರದಂದು ಮಜುಂದಾರ್‍ರನ್ನು ಕೇಜ್ರಿವಾಲ್ ಏಕಾಏಕಿ ಹುದ್ದೆಯಿಂದ ತೆಗೆದುಹಾಕಿ ಆದೇಶ ಹೊರಡಿಸಿದ್ದಲ್ಲದೆ ಅವರ ಸ್ಥಾನಕ್ಕೆ ರಾಜೇಂದ್ರ ಕುಮಾರ್‍ರನ್ನು ನೇಮಿಸಿದ್ದರು. ಆದರೆ ಸೋಮವಾರ ಜಂಗ್ ಕೇಜ್ರಿವಾಲ್ ಸರ್ಕಾರದ ಆದೇಶ ತಿರಸ್ಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

ಕಾಕಿನಾಡ ಯುವಕನಿಗೆ ₹1 ಕೋಟಿ ಸಂಬಳದ AI ಉದ್ಯೋಗ: ವಿಶೇಷಚೇತನ ಟೇಲರ್ ಪುತ್ರನಿಗೆ ಬಂಪರ್ ಆಫರ್!

ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13 ರಿಂದ ಆರಂಭ; ಟಾಪ್‌ 10 ಚರ್ಚಾ ವಿಷಯಗಳಿವು