ನವದೆಹಲಿ: ಕೇಂದ್ರ ಎನ್ ಡಿ ಎ ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಸ್ವಾಧಿನ ಮಸೂದೆ ಜಾರಿ ಸಂಬಂಧ ವಿಧೇಯಕವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರೈತರ ಹಿತ ದೃಷ್ಟಿಯಿಂದ ಸರ್ಕಾರ ಮಸೂದೆಗೆ ತಿದ್ದು ಪಡಿ ತರಲು ಮುಂದಾಗಿದೆ ಎಂದರು. ಕಾಂಗ್ರೆಸ್ ಬಿಟ್ಟು ಎಲ್ಲಾ ಪಕ್ಷಗಳು ಮಸೂದೆ ಅಂಗೀಕಾರಕ್ಕೆ ಒಪ್ಪಿಗೆ ನೀಡಿವೆ. ಆದರೆ ಕಾಂಗ್ರೆಸ್ ಮಾತ್ರ ರಾಜಕೀಯಕ್ಕಾಗಿ ಮಸೂದೆಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ ಒಳಿತಿಗಾಗಿ ಬಲವಂತವಲಾಗಿಯಾದರೂ ಮಸೂದೆಯನ್ನು ಜಾರಿಗೆ ತರುವ ಭರವಸೆ ವ್ಯಕ್ತ ಪಡಿಸಿದರು.
ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ವಿರೋಧ ಪಕ್ಷಗಳ ಬೆಂಬಲ ಕೇಳಿರುವುದಾಗಿ ತಿಳಿಸಿದ ನಿತಿನ್ ಗಡ್ಕರಿ ಈಗಾಗಲೇ ಮಸೂದೆಗೆ 9 ಹೊಸ ತಿದ್ದುಪಡಿಗಳನ್ನು ಮಾಡಲಾಗಿದೆ. ಮತ್ತಷ್ಟು ತಿದ್ದು ಪಡಿಗಳ ಅಗತ್ಯವಿದ್ದರೆ ಅದನ್ನು ಪ್ರಧಾನಿ ಮೋದಿ ಖಂಡಿತ ಒಪ್ಪುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.