ದಾವೂದ್ ಇಬ್ರಾಹಿಂ 
ದೇಶ

ಉಗ್ರ ದಾವೂದ್ ಇಬ್ರಾಹಿಂ ಇರುವುದು ಕರಾಚಿಯಲ್ಲೇ

ಇದು ಕುಖ್ಯಾತ ಭೂಗತ ಪಾತಕಿ ಹಾಗೂ ಉಗ್ರ ದಾವೂದ್ ಇಬ್ರಾಹಿಂನ ಮನೆಯ ವಿಳಾಸ ಹಾಗೂ ಆತನ ಮತ್ತು ಆತನ ಕುಟುಂಬದ...

ಇಸ್ಲಾಮಾಬಾದ್: ದಾವೂದ್ ಇಬ್ರಾಹಿಂ ಮರ್ರೀ ರೋಡ್ ಕರಾಚಿ, ಪಾಕಿಸ್ತಾನ ಪಾಸ್ ಪೋರ್ಟ್ ನಂಬರ್- ಜಿ-866537, ಸಿ-267185 ಕೆಸಿ-285901 ಏನೀ ವಿವರಗಳು ಎಂದು ಗೊಂದಲವೇ?

ಇದು ಕುಖ್ಯಾತ ಭೂಗತ ಪಾತಕಿ ಹಾಗೂ ಉಗ್ರ ದಾವೂದ್ ಇಬ್ರಾಹಿಂನ ಮನೆಯ ವಿಳಾಸ ಹಾಗೂ ಆತನ ಮತ್ತು ಆತನ ಕುಟುಂಬದ ಪಾಸ್ ಪೋರ್ಟ್ ಸಂಖ್ಯೆಗಳು! ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಪಾತಕಿಗೆ ತನ್ನದೇ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದೆ. ಇಂಥ ಒಂದು ವಿಚಾರವನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ಗುಪ್ತಚರ ಸಂಸ್ಥೆಗಳು ಯಶಸ್ವಿಯಾಗಿದೆ ಎಂದು ಸಿಎನ್‍ಎನ್-ಐಬಿಎನ್ ಸುದ್ದಿ ಬಿತ್ತರಿಸಿದೆ.

ದಾವೂದ್ ಎಲ್ಲಿದ್ದಾನೆ ಎಂಬುದೇ ನಿಗೂಢ ಪ್ರಶ್ನೆಯಾಗಿ ಪಾಕಿಸ್ತಾನ ಪದೇಪದೆ ನಕಾರಾತ್ಮಕ ಉತ್ತರ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆತನ ಬಗೆಗಿನ ಮೋದಿ ಹೇಳಿಕೆಗೆ ವ್ಯಾಪಕ ಟೀಕೆಯಾಗಿತ್ತು. ಪ್ರಧಾನಿ ಮೋದಿ ಹಾಗೂ ರಾಜನಾಥ್ ಸಿಂಗ್ ದಾವೂದ್ ಪಾಕಿಸ್ತಾನದಲ್ಲಿ ಬಚ್ಚಿಟ್ಟುಕೊಂಡಿದ್ದಾನೆ ಎಂದು ಖಡಾಖಂಡಿತವಾಗಿ ಹೇಳಿದಾಗ ಅದೊಂದು ಪೂರ್ವಾಗ್ರಹ ಪೀಡಿತ ಹೇಳಿಕೆ ಎನ್ನಲಾಗಿತ್ತು.

ಆದರೆ ಈಗ ದಾವೂದ್ ಇಬ್ರಾಹಿಂ ಕರಾಚಿಯ ಮರ್ರೀ ರಸ್ತೆಯ ಬಂಗಲೆಯಲ್ಲಿ ವಾಸಿಸುತ್ತಿರುವ ಬಗ್ಗೆ ವಿವರಗಳು ಲಭ್ಯವಾಗಿದ್ದು, ಈ ಮೊದಲು ಇಸ್ಲಾಮಾಬಾದ್‍ನಲ್ಲಿ ಇದ್ದನೆಂದೂ ತಿಳಿದುಬಂದಿದೆ. ಜೊತೆಗೆ ಆತನ ಕುಟುಂಬದವರ ಪಾಸ್‍ಪೋರ್ಟ್ ಗಳೂ ಲಭ್ಯವಾಗಿವೆ. ಪಾಕಿಸ್ತಾನದ ಐಎಸ್‍ಐ ದಾವೂದ್‍ನ ರಕ್ಷಣೆಗೆ ನಿಂತಿರುವುದನ್ನು ಕೂಡ ಭಾರತೀಯ ಗುಪ್ತಚರ ಇಲಾಖೆ ಪತ್ತೆಹಚ್ಚಿದೆ.

1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣವೂ ಸೇರಿದಂತೆ ಹಲವು ಭೂಗತ ಚಟುವಟಿಕೆಗಳಲ್ಲಿ ದಾವೂದ್ ಮೋಸ್ಟ್ ವಾಂಟೆಡ್ ಆಗಿದ್ದು, ಪಾಕ್‍ನಿಂದ ಭಾರತಕ್ಕೆ ಹಸ್ತಾಂತರವಾಗುವುದಕ್ಕೆ ಇದೀಗ ಗಟ್ಟಿ ಸಾಕ್ಷಿ ದೊರೆತಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ