ಮೋದಿ ಸೆಲ್ಫಿ 
ದೇಶ

ಸೆಲ್ಫಿ ವ್ಯಾಮೋಹಿ ಮೋದಿ ವಿರುದ್ಧ ಕಾಂಗ್ರೆಸ್ ಸಿಡಿಮಿಡಿ

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಹಾಗೂ ಅವರ ಸೆಲ್ಫಿ ವ್ಯಾಮೋಹ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಹಾಗೂ ಅವರ ಸೆಲ್ಫಿ ವ್ಯಾಮೋಹ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ನರೇಂದ್ರ ಮೋದಿಯವರ ಸೆಲ್ಫಿ ಗೀಳಿನ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ ಮೋದಿ ತಾವು ವಿದೇಶ ಪ್ರವಾಸ ಹೊರಟಾಗ ಅಲ್ಲಿನ ಮುಖ್ಯಸ್ಥರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ತಪ್ಪಿಲ್ಲ.  ಪ್ರಧಾನಿ ಅವರು ಸಂಕಷ್ಟದಲ್ಲಿರುವ ರೈತರ ಜೊತೆಗೂ ಸೆಲ್ಫಿ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಮಿಲಿಂದ್ ದೋರಾ ಸಲಹೆ ನೀಡಿದ್ದಾರೆ.  ಚೆನ್ನೈ ನಲ್ಲಿ ಮಾತನಾಡಿದ ಅವರು, ಪ್ರದಾನಿ ಸಾಮಾನ್ಯ ಪ್ರಜೆಯ ಜೊತೆಯೂ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದಿದ್ದಾರೆ.
ಇನ್ನೂ ಹೈದರಾಬಾದ್ ನಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜೈ ರಾಮ್ ರಮೇಶ್ ಕೂಡ ಮೋದಿ ಸೆಲ್ಫಿ ಗೀಳಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಬಿಜೆಪಿ ಅಧಿಕಾರಕ್ಕೆ ಬರಪವಾಗ ತಾವು ನಿಸ್ವರ್ಥರು ಎಂದು ಹೇಳಿ ಈಗ ಪ್ರಧಾನಿ ಮೋದಿ ಸೇರಿದಂತೆ ಎನ್ ಡಿಎ ಸರ್ಕಾರದ ಎಲ್ಲಾ ಸಂಪುಟ ಸಚಿವರು ಸ್ವಾರ್ಥಿಗಳಾಗಿ ದೇಶದ ಜನತೆ ಹಿತ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

ಮಂಡಿಯೂರಿದ ಕೇಂದ್ರ ಸರ್ಕಾರ: ಜೈಲಿನಲ್ಲಿದ್ದ Sonam Wangchuk ಗೆ ಕೊನೆಗೂ ಬಂಧನದಿಂದ ಮುಕ್ತಿ: ಕೇಂದ್ರ ಹೇಳಿದ್ದೇನು?

ಇರಾನ್ ಜೊತೆಗೆ ಸರಣಿ ಮಾತುಕತೆ: ಹಾರ್ಮುಜ್ ಜಲಸಂಧಿ ದಾಟಿದ LPG ಹೊತ್ತ ಭಾರತದ 2 ಹಡಗುಗಳು!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಹೊಸ ಖಮೇನಿ ಭಯೋತ್ಪಾದಕ ನಾಯಕ; ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕ

SCROLL FOR NEXT