ಜೈಪುರದಲ್ಲಿ ಬಿರುಗಾಳಿಯಿಂದಾಗಿ ಧರೆಗುರುಳಿದ ಮರವನ್ನು ಪಕ್ಕಕ್ಕೆ ಸರಿಸಲು ಯತ್ನಿಸುತ್ತಿರುವ ಸಾರ್ವಜನಿಕರು. 
ದೇಶ

ಉತ್ತರ ಭಾರತದಲ್ಲಿ ಬಿರುಗಾಳಿ: ರಾಜಸ್ಥಾನದಲ್ಲಿ 7 ಮಂದಿ ಬಲಿ

ಉತ್ತರ ಭಾರತದಲ್ಲಿ ಮಂಗಳವಾರ ಬಿರುಗಾಳಿ ಸೃಷ್ಟಿಸಿದ್ದ ಅನಾಹುತಕ್ಕೆ ಹಲವು ಮನೆಗಳು ನಾಶವಾಗಿದ್ದು, ರಾಜಸ್ಥಾನದಲ್ಲಿ 7 ಮಂದಿ ಬಲಿಯಾಗಿದ್ದಾರೆ...

ನವದೆಹಲಿ: ಉತ್ತರ ಭಾರತದಲ್ಲಿ ಮಂಗಳವಾರ ಬಿರುಗಾಳಿ ಸೃಷ್ಟಿಸಿದ್ದ ಅನಾಹುತಕ್ಕೆ ಹಲವು ಮನೆಗಳು ನಾಶವಾಗಿದ್ದು, ರಾಜಸ್ಥಾನದಲ್ಲಿ 7 ಮಂದಿ ಬಲಿಯಾಗಿದ್ದಾರೆ.

ಬೇಸಿಗೆಯಿಂದ ನಲುಗಿದ್ದ ಉತ್ತರ ಭಾರತದ ಹಲವೆಡೆ ನಿನ್ನೆ ಮಳೆ ಆರಂಭವಾಗಿತ್ತು. ಈ ವೇಳೆ ಗಾಳಿ ಹೆಚ್ಚಾಗಿದೆ. ನಂತರ 4.15 ಸಂಜೆ ಸುಮಾರಿಗೆ ಬಂದ ಬಿರುಗಾಳಿ ಅಲ್ಲಿನ ಜನತೆಯನ್ನು ಭಯಭೀತ ಗೊಳಿಗೊಳಿಸಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿಗಳು ಧರೆಗುಳುವಂತೆ ಮಾಡಿದೆ. ಅಲ್ಲದೆ ಗಾಳಿಯ ತೀವ್ರತೆ ಹೆಚ್ಚಾದ ಕಾರಣ ರಸ್ತೆಗಳೆಲ್ಲ ಧೂಳುಮಯವಾಗಿದೆ. ಇದರಿಂದಾಗಿ ರಾಜಸ್ಥಾನದಲ್ಲಿ 7ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ರಾಜಸ್ತಾನ ಒಂದರಲ್ಲೇ 5 ಮಂದಿ ಸಾವನ್ನಪ್ಪಿದ್ದು, ಭರತ್ಪುರ ಹಾಗೂ ಬಿಕನರ್ ನಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಿರುಗಾಳಿಯಿಂದ ಅಲ್ಲಿನ ಮನೆಗಳು ನಾಶಗೊಂಡಿದ್ದು, ಹಲವೆಡೆ ರಸ್ತೆಗಳಲ್ಲಿ ಮರಗಳು ಧರೆಗುರುಳಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT