ಲೆಗ್ ಸೆಲ್ಫಿ (ಕೃಪೆ- ಫೇಸ್ ಬುಕ್ ) 
ದೇಶ

ಮಿನಿ ಸ್ಕರ್ಟ್‌ಗೆ ನಿಷೇಧ: ಅಲ್ಜೀರಿಯಾದಲ್ಲಿ ಶುರುವಾಯ್ತು ಲೆಗ್ ಸೆಲ್ಫಿ ವಿಪ್ಲವ

ಅಲ್ಜೇರಿಯಾದ ವಿಶ್ವವಿದ್ಯಾಲಯವೊಂದರಲ್ಲಿ ಮಿನಿ ಸ್ಕರ್ಟ್ ನಿಷೇಧಿಸಿರುವುದನ್ನು ಪ್ರತಿಭಟಿಸಿ ಸಾಮಾಜಿಕ ತಾಣಗಳಲ್ಲಿ ಲೆಗ್ ಸೆಲ್ಪಿ ವಿಪ್ಲವ ಶುರು...

ಅಲ್ಜೀರಿಯಾ: ಅಲ್ಜೇರಿಯಾದ ವಿಶ್ವವಿದ್ಯಾಲಯವೊಂದರಲ್ಲಿ ಮಿನಿ ಸ್ಕರ್ಟ್ ನಿಷೇಧಿಸಿರುವುದನ್ನು  ಪ್ರತಿಭಟಿಸಿ ಸಾಮಾಜಿಕ ತಾಣಗಳಲ್ಲಿ ಲೆಗ್ ಸೆಲ್ಫಿ ವಿಪ್ಲವ ಶುರುವಾಗಿದೆ.

ವಿದ್ಯಾರ್ಥಿನಿಯೊಬ್ಬಳು ಅಲ್ಜೀರ್ಸ್ ವಿವಿಯಲ್ಲಿ ಕಾನೂನು ವಿಭಾಗದಲ್ಲಿ ಪರೀಕ್ಷೆ ಬರೆಯಲು ಬಂದಾಗ ಮಿನಿ ಸ್ಕರ್ಟ್ ಧರಿಸಿದ್ದಳು. ಮಿನಿಸ್ಕರ್ಟ್ ಧರಿಸಿದ್ದಕ್ಕಾಗಿ ಆಕೆ ಪರೀಕ್ಷೆ ಬರೆಯದಂತೆ ತಡೆಯೊಡ್ಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೀನ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ವಿವಿಯಲ್ಲಿನ ವಿದ್ಯಾರ್ಥಿಗಳು ಡ್ರೆಸ್ ಕೋಡ್ ಪಾಲಿಸಬೇಕಾಗಿದೆ. ಅದರರ್ಥ ಅವರು ಹಿಜಾಬ್ ಧರಿಸಿಕೊಂಡೇ ತರಗತಿಗೆ ಬರಬೇಕು ಎಂದಲ್ಲ. ಕನಿಷ್ಠ ಪಕ್ಷ ಇಲ್ಲಿನ ವಿದ್ಯಾರ್ಥಿಗಳು ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರಲಿ ಎಂದು ಡೀನ್ ಪ್ರತಿಕ್ರಯಿಸಿದ್ದಾರೆ.

ಅದೇ ವೇಳೆ ವಿವಿಯ ತೀರ್ಮಾನವನ್ನು ಖಂಡಿಸಿ ಅಲ್ಲಿ ಸೋಫಿಯಾ ಜಮಾ ಎಂಬ ವಿದ್ಯಾರ್ಥಿನಿ ಫೇಸ್‌ಬುಕ್‌ನಲ್ಲಿ ma dignité n'est pas dans la longueur de ma jupe (My dignity is not in the length of my skirt) ಎಂಬ ಪೇಜ್ ಆರಂಭಿಸಿದ್ದಾಳೆ. ಇದರಲ್ಲಿ ಎಲ್ಲರೂ ತಮ್ಮ ನಗ್ನ  ಕಾಲುಗಳ ಫೋಟೋ ಅಪ್‌ಲೋಡ್ ಮಾಡುವಂತೆ ವಿನಂತಿಸಿದ್ದು, ಈ ಪೇಜ್‌ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನಾಲ್ಕು ದಿನಗಳ ಹಿಂದೆ ಆರಂಭವಾಗಿರುವ ಈ ಪೇಜ್‌ನ್ನು 11 ಸಾವಿರ ಜನ ಲೈಕ್ ಮಾಡಿದ್ದಾರೆ. ಬಹಳಷ್ಟು ಜನ ನಗ್ನ ಕಾಲುಗಳ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದು, ಇದು ಲೆಗ್ ಸೆಲ್ಫಿ ವಿಪ್ಲವಕ್ಕೆ ನಾಂದಿ ಹಾಡಿದೆ.

ವಿವಿಗಳಲ್ಲಿ ಮಿನಿ ಸ್ಕರ್ಟ್ ನಿಷೇಧ ಮಾತ್ರವಲ್ಲ, ನನ್ನ ತುಂಡುಡುಗೆಯನ್ನು ಸಭ್ಯತೆಯ ಮಾಪನವನ್ನಾಗಿರಿಸಬೇಡಿ ಎಂಬ ಸಂದೇಶವನ್ನು ನೀಡುವ ಲೆಗ್ ಸೆಲ್ಫಿಗಳು ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT