ಎಟಿಎಂನಲ್ಲಿ ಹಣ ದೋಚಿದ ವ್ಯಕ್ತಿ (ಸಿಸಿಟಿವಿ ದೃಶ್ಯ) 
ದೇಶ

ಎಟಿಎಂನಲ್ಲಿ ಗುಂಡು ಹಾರಿಸಿ ಮಹಿಳೆಯ ಆಭರಣ ದೋಚಿದ!

ಇಲ್ಲಿನ ಯೂಸಫ್‌ಗಢದಲ್ಲಿರುವ ಎಟಿಎಂ ಒಂದರಲ್ಲಿ ಆಗಂತುಕನೊಬ್ಬ ಗುಂಡು ಹಾರಿಸಿ ಮಹಿಳೆಯ ಆಭರಣ ಮತ್ತು ಮೊಬೈಲ್ ಫೋನ್ ದೋಚಿರುವ...

ಹೈದಾರಾಬಾದ್:  ಇಲ್ಲಿನ ಯೂಸಫ್‌ಗಢದಲ್ಲಿರುವ ಎಟಿಎಂ ಒಂದರಲ್ಲಿ ಆಗಂತುಕನೊಬ್ಬ ಗುಂಡು ಹಾರಿಸಿ ಮಹಿಳೆಯ ಆಭರಣ ಮತ್ತು ಮೊಬೈಲ್ ಫೋನ್ ದೋಚಿರುವ ಘಟನೆ ವರದಿಯಾಗಿದೆ.

ಪೊಲೀಸರ ಪ್ರಕಾರ ಬುಧವಾರ ಬೆಳಗ್ಗೆ 7.45ಕ್ಕೆ ಈ ಘಟನೆ ನಡೆದಿದೆ. ಹಣ ವಿತ್‌ಡ್ರಾ ಮಾಡಲು ಲಲಿತಾ (25) ಎಂಬಾಕೆ ಎಟಿಎಂಗೆ ಹೋಗಿದ್ದರು. ಆಗ ಮುಸುಕುಧಾರಿ ವ್ಯಕ್ತಿಯೊಬ್ಬ ಎಟಿಎಂಗೆ ನುಗ್ಗಿ ಆಭರಣಗಳನ್ನು ನೀಡುವಂತೆ ಲಲಿತಾ ಅವರಿಗೆ ಆದೇಶಿಸಿದ್ದಾನೆ. ಆಕೆ ನೀಡಲು ನಿರಾಕರಿಸಿದಾಗ ಆತ ಕೈಯಲ್ಲಿದ್ದ ಪಿಸ್ತೂಲ್ ನಿಂದ ಎಟಿಎಂ ಗೋಡೆಗೆ ಗುಂಡು ಹಾರಿಸಿದ್ದಾನೆ.

ಇದಾದ ನಂತರ ಆತ ಆಕೆಯ ಬಳಿ ಇದ್ದ ಚಿನ್ನದ ಸರ, ಕಿವಿಯೋಲೆ (ಒಟ್ಟು 20 ಗ್ರಾಂ ಚಿನ್ನ), ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ ದೋಚಿದ್ದಾನೆ.

ಎಟಿಎಂ ಪಾಸ್‌ವರ್ಡ್ ಹೇಳುವಂತೆ ಒತ್ತಾಯಿಸಿದ ಆತ ಎಟಿಎಂನಿಂದ ಹಣ ತೆಗೆಯಲು ಯತ್ನಿಸಿದಾಗ ಮೊದಲು ತಾಂತ್ರಿಕ ದೋಷದಿಂದ ಹಣ ತೆಗೆಯಲಾಗಲಿಲ್ಲ. ಅಲ್ಲಿಂದ ಆತ ಪರಾರಿಯಾದ 15 ನಿಮಿಷಗಳಲ್ಲಿ ಅದೇ ಎಟಿಎಂ ಕಾರ್ಡ್ ಬಳಸಿ ಆತ 2, 500 ರು. ವಿತ್‌ಡ್ರಾ ಮಾಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!