ನವದೆಹಲಿ: ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಕುರಿತಂತೆ ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಎದ್ದಿರುವ ಗೊಂದಲಗಳನ್ನು ಗೃಹ ಇಲಾಖೆಯ ವಿಶೇಷ ಅಧಿಸೂಚನೆ ದೂರ ಮಾಡಲಿದ್ದು, ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಉತ್ತಮ ಆಡಳಿತ ನೀಡಬಹುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಗೃಹ ಇಲಾಖೆ ವಿಶೇಷ ಅಧಿಸೂಚನೆ ಕುರಿತಂತೆ ಸ್ಪಷ್ಟಪಡಿಸಿರುವ ಅರುಣ್ ಜೇಟ್ಲಿ, ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರ ಕುರಿತಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ಗೊಂದಲಗಳನ್ನು ದೂರ ಮಾಡಲಿವೆ. ಇದು ಸಾಂವಿಧಾನಿಕವಾಗಿದ್ದು, ರಾಜಕೀಯ ಸಮಸ್ಯೆ ಅಲ್ಲ ಎಂದು ಹೇಳಿದ್ದಾರೆ.
ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇದೆ ಎಂದು ಗೃಹ ಇಲಾಖೆ ಗುರುವಾರ ವಿಶೇಷ ಪ್ರಕಟಣೆ ಹೊರಡಿಸಿತ್ತು.