ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ 
ದೇಶ

ಯುವತಿಗೆ ಆಸೀಡ್ ಎರಚಿದ ಬಳಿಕ ಆತ್ಮಹತ್ಯೆಗೆ ಶರಣಾದ ಯುವಕ

ನೆರೆಮನೆಯ ಯುವತಿ ಮೇಲೆ ಆಸೀಡ್ ಎರಚಿ ಬಳಿಕ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ...

ಭೋಪಾಲ್: ನೆರೆಮನೆಯ ಯುವತಿ ಮೇಲೆ ಆಸೀಡ್ ಎರಚಿ ಬಳಿಕ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಆಸೀಡ್ ದಾಳಿಗೆ ಒಳಗಾಗಿರುವ ಸಂತ್ರಸ್ತೆಯನ್ನು 20 ವರ್ಷದ ರೇಣು ಸಾಹು ಎಂದು ಗುರುತಿಸಲಾಗಿದೆ. ಇಕೆ ಜಿಮ್ ಟ್ರೈನರ್ ಆಗಿದ್ದು, ಇಂದು ಮುಂಜಾನೆ ರೇಣು ಸಾಹು ಕೆಲಸಕ್ಕೆ ಹೋಗುತ್ತಿದ್ದಂತ ಸಂದರ್ಭದಲ್ಲಿ ನೆರೆ ಮನೆಯಲ್ಲಿ ವಾಸವಾಗಿದ್ದ ಸಂಜಯ್ ಪಾಟೀಲ್ ಆಕೆಯ ಮೇಲೆ ಆಸೀಡ್ ಎರೆಸಿದ್ದಾನೆ. ಇದರಿಂದ ತೀವ್ರ ಸುಟ್ಟ ಗಾಯಗೊಳಗಾಗಿರುವ ರೇಣು ಸಾಹುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸಂಜಯ್ ಪಾಟೀಲ್ ನನ್ನು ಸ್ಥಳೀಯ ಗುಂಪೊಂದು ಥಳಿಸಿದ್ದು ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ ಕೆಲಸಕ್ಕೆಂದು ಹೊರಟ ರೇಣು ಸಾಹುವನ್ನು ಸಂಜಯ್ ಪಾಟೀಲ್ ಹಿಂಬಾಲಿಸಿದ್ದಾನೆ. ಇದನ್ನು ಗಮನಿಸಿದ ರೇಣು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿಸಿದ್ದಾಳೆ. ಆದರೆ ಪೊಲೀಸರು ದೂರು ತೆಗೆದುಕೊಳ್ಳದ ಕಾರಣ ಆಕೆ ಅಲ್ಲಿಂದ ಹೊರ ಬಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಂತೆ ಸಂದರ್ಭದಲ್ಲಿ ಅಡ್ಡ ಹಾಕಿದ ಸಂಜಯ್ ಆಕೆಯ ಮೇಲೆ ಆಸೀಡ್ ಎರೆಚಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ಸ್ಥಳೀಯರ ಗಂಪೊಂದು ಸಂಜಯ್ಗೆ ತೀವ್ರವಾಗಿ ಥಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

ಹಗ್ಗ 16 ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆ: ಏನೋ ದಬಾಕಕ್ಕೆ ಹೋಗವನೆ, ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು; ಯಶ್ ತಾಯಿ

ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ವಿಳಂಬ; ಸರ್ಕಾರದ ವಿರುದ್ಧ AIDSO ಆಕ್ರೋಶ

2027ರ ಏಕದಿನ ವಿಶ್ವಕಪ್‌ಗೆ ಬ್ಯಾಕಪ್ ಆಟಗಾರನಿಗಾಗಿ ಹುಡುಕಾಟ; ಗೌತಮ್ ಗಂಭೀರ್, ಶುಭಮನ್ ಗಿಲ್ ಗಮನಸೆಳೆದ ತಿಲಕ್ ವರ್ಮಾ!