ಗೃಹ ಸಚಿವ ರಾಜನಾಥ ಸಿಂಗ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಶೀಘ್ರದಲ್ಲೇ ಅಂಕಿತ: ರಾಜನಾಥ್ ಸಿಂಗ್

ನೆನಗುದಿಗೆ ಬಿದ್ದಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಮರು ಜೀವ ಬರುವ ಸಾಧ್ಯತೆಗಳು ಹೆಚ್ಚಿದ್ದು, ಭಾರತ ಹಾಗೂ ಬಾಂಗ್ಲಾದೇಶ ಶೀಘ್ರದಲ್ಲೇ ಒಪ್ಪಿಗೆ ಸೂಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ...

ಕೋಲ್ಕತಾ: ನೆನಗುದಿಗೆ ಬಿದ್ದಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಮರು ಜೀವ ಬರುವ ಸಾಧ್ಯತೆಗಳು ಹೆಚ್ಚಿದ್ದು, ಭಾರತ ಹಾಗೂ ಬಾಂಗ್ಲಾದೇಶ ಶೀಘ್ರದಲ್ಲೇ ಒಪ್ಪಿಗೆ ಸೂಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಹೇಳಿಕೆ ನೀಡಿದ್ದು, ಉಭಯ ದೇಶಗಳು ಶೀಘ್ರದಲ್ಲೇ ಒಪ್ಪಿಗೆ ಸೂಚಿಸಲಿದೆ. ಈ ಕುರಿತಂತೆ ಪಶ್ಚಿಮಬಂಗಾಳ ಸರ್ಕಾರವೂ ಸಂಪೂರ್ಣ ಸಹಕಾರ ನೀಡುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಭೂ ಗಡಿ ವಿವಾದ ಕುರಿತಂತೆ ಮಾತನಾಡಿರುವ ಅವರು, ಭಾರತ-ಬಾಂಗ್ಲಾದೇಶದ ಗಡಿವಿವಾದವು 40 ವರ್ಷಗಳಿಂದಲೂ ನೆನಗುದಿಗೆ ಬಿದ್ದಿತ್ತು. ಇದೀಗ ಈ ವಿವಾದ ಇತ್ಯರ್ಥಗೊಂಡಿದೆ ಎಂದಿದ್ದಾರೆ.

ಈ ಹಿಂದೆ ಬಾಂಗ್ಲಾದೇಶದ ಹೈ ಕಮೀಷನರ್ ಸಯೀದ್ ಮೌಜಮ್ ಅಲಿ ಅವರು ತೀಸ್ತಾ ನದಿ ನೀರು ಹಂಚಿಕೆ ಕುರಿತಂತೆ ಭಾರತ ಹಾಗೂ ಬಾಂಗ್ಲಾದೇಶದ  ಮಧ್ಯೆ ಇರುವ ವಿವಾದವು ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದ್ದರು. ಇದೇ ರೀತಿಯ ಹೇಳಿಕೆಯನ್ನು ರಾಜನಾಥ್ ಸಿಂಗ್ ಅವರು ಸಹ ನೀಡಿರುವುದರಿಂದ ತೀಸ್ತಾ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಗೊಳ್ಳುವ ವಿಶ್ವಾಸಗಳು ಮತ್ತಷ್ಟು ಗಟ್ಟಿಯಾಗತೊಡಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ನನ್ನ ಕಾರನ್ನೇ ತೆಗಸ್ತೀಯಾ, ನಿನ್ನ ವಿರುದ್ಧ ಪ್ರಕರಣವೊಂದಿದೆ ಹುಷಾರ್: ವಿಧಾನಸೌಧದ ಗೇಟ್ ಬಳಿ DCP ಯೋಗಿಶ್‌ಗೆ ಸಿದ್ದರಾಮಯ್ಯ ತರಾಟೆ!

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ ಹಾಕಿದ್ದ ಇನ್ಸ್‌ಪೆಕ್ಟರ್‌ ಧನಂಜಯ್‌ಗೆ ಮತ್ತೊಂದು ಸಂಕಷ್ಟ; ಪೊಲೀಸ್ ವರಿಷ್ಠಾಧಿಕಾರಿಗೆ ದೂರು

"ಮುಸ್ಲಿಂ ಯುವಕರೇ ನಿಮ್ಮ ಸಹೋದರಿಯರನ್ನು ಕರೆತನ್ನಿ, ನಮ್ಮ ಹುಡುಗರು ರೆಡಿ": ಗರ್ಬಾದಲ್ಲಿ ನಾಲಿಗೆ ಹರಿಬಿಟ್ಟ BJP ಶಾಸಕ!

ಜಮುಯಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡು! ಬಂಧಿತರ ಸಂಖ್ಯೆ 3ಕ್ಕೇರಿಕೆ