ಮಿಸ್ಬಾ ಖಾದ್ರಿ 
ದೇಶ

ಮುಸ್ಲಿಂ ಎಂಬ ಕಾರಣಕ್ಕೆ ಫ್ಲ್ಯಾಟ್ ನೀಡಲು ನಿರಾಕರಿಸಿದರು: ಮುಂಬೈ ಯುವತಿ ಆರೋಪ

ತಾನು ಮುಸ್ಲಿಂ ಎಂಬ ಕಾರಣಕ್ಕೆ ಮುಂಬೈನಲ್ಲಿ ತನಗೆ ಫ್ಲ್ಯಾಟ್ ನೀಡಲು ನಿರಾಕರಿಸಿದರು ಎಂದು 25 ವರ್ಷದ ಮಿಸ್ಬಾ ಖಾದ್ರಿ ಅವರು ಬುಧವಾರ ಆರೋಪಿಸಿದ್ದಾರೆ.

ಮುಂಬೈ: ತಾನು ಮುಸ್ಲಿಂ ಎಂಬ ಕಾರಣಕ್ಕೆ ಮುಂಬೈನಲ್ಲಿ ತನಗೆ ಫ್ಲ್ಯಾಟ್ ನೀಡಲು ನಿರಾಕರಿಸಿದರು ಎಂದು 25 ವರ್ಷದ ಮಿಸ್ಬಾ ಖಾದ್ರಿ ಅವರು ಬುಧವಾರ ಆರೋಪಿಸಿದ್ದಾರೆ.

ವದಲಾದ ಸಾಘ್ವಿ ಹೈಟ್ಸ್‌ನಲ್ಲಿರುವ ಮೂರು ಬೆಡ್‌ರೂಂನ ಮನೆಗೆ ಇನ್ನೇನು ಶಿಫ್ಟ್ ಆಗಬೇಕು ಎನ್ನುವ ಸಂದರ್ಭದಲ್ಲಿ, ಹೌಸಿಂಗ್ ಸೊಸೈಟಿ ಮುಸ್ಲಿಂ ಬಾಡಿಗೆದಾರರಿಗೆ ಮನೆ ನೀಡುವುದಿಲ್ಲ ಎಂದು ಬ್ರೋಕರ್ ಬೆದರಿಕೆ ಹಾಕಿದರು ಎಂದು ಯುವತಿ ದೂರಿದ್ದಾರೆ.

ಒಂದು ವೇಳೆ ಸೊಸೈಟಿಯ ವಿರೋಧದ ನಡುವೆಯೂ ನೀವು ಫ್ಲ್ಯಾಟ್ ನಲ್ಲಿ ವಾಸಿಸುವುದಾದರೆ 'ನಿರಪೇಕ್ಷಣಾ ಪತ್ರ'ಕ್ಕೆ ಸಹಿ ಹಾಕಬೇಕು ಮತ್ತು ಅಲ್ಲಿ ನೆರಹೊರೆಯವರ ಕಿರುಕುಳಕ್ಕೆ ನಾವು ಹೊಣೆಯಲ್ಲಿ ಎಂದು ಬರೆದುಕೊಡಬೇಕು ಎಂದು ಬ್ರೋಕರ್ ಹೇಳಿರುವುದಾಗಿ ಖಾದ್ರಿ ತಿಳಿಸಿದ್ದಾರೆ.

ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಲವು ಬ್ರೋಕರ್‌ಗಳು ನನಗೆ ಮನೆ ತೋರಿಸಲು ಸಹ ನಿರಾಕರಿಸಿದ್ದರು. ಅಲ್ಲದೆ ಮನೆ ಮಾಲೀಕರು ಸಹ ಧಾರ್ಮಿಕ ಕಾರಣ ನೀಡುತ್ತಿದ್ದಾರೆ ಎಂದು ಯುವತಿ ತನ್ನ ಅಳಲು ತೋಡಿಕೊಂಡಿದ್ದಾರೆ.

ಒಂದು ವಾರದ ಹಿಂದಷ್ಟೇ ಮುಂಬೈ ಮೂಲದ ವಜ್ರಾಭರಣ ರಫ್ತು ಸಂಸ್ಥೆಯು ಮುಸ್ಲಿಂ ಎಂಬ ಕಾರಣ ನೀಡಿ ಕೆಲಸಕ್ಕಾಗಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರ  ಜೆಶಾನ್ ಅಲಿ ಖಾನ್ ಎಂಬುವವರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!