ದೇಶ

ಎಂಪಿಲಾಡ್ ನಿಧಿ ಬಳಸದ ಶೇ.55 ಸಂಸದರು!

Mainashree

ನವದೆಹಲಿ: ಅಧಿಕಾರಕ್ಕೇರಿ ಒಂದು ವರ್ಷ ಕಳೆದರೂ ಕರ್ನಾಟಕದ 20 ಮಂದಿ ಸೇರಿದಂತೆ ಶೇ.55ರಷ್ಟು ಸಂಸದರು ತಮ್ಮ ಎಂಪಿ ಲಾಡ್ ನಿಧಿಯಿಂದ ಒಂದೇ ಒಂದು ರುಪಾಯಿಯನ್ನೂ ವೆಚ್ಚ ಮಾಡಿಲ್ಲ.

ಪ್ರತಿಯೊಬ್ಬ ಸಂಸದರಿಗೂ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ವರ್ಷಕ್ಕೆ ರು.5 ಕೋಟಿಯನ್ನು ಮೀಸಲಿಡಲಾಗುತ್ತದೆ. ಆದರೆ 542 ಮಂದಿ ಸಂಸದರ ಪೈಕಿ 298 ಮಂದಿ ಸಂಸದರ ಸ್ಥಳೀಯಾಭಿವೃದ್ಧಿ ನಿಧಿ(ಎಂಪಿಲಾಡ್)ಯನ್ನು ಬಳಸಿಯೇ ಇಲ್ಲ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಎಂಪಿಲಾಡ್ ನಿಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸಂಸದರ ಪೈಕಿ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ (ಲಖನೌ), ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ (ಬೆಂಗಳೂರು ದಕ್ಷಿಣ), ಕಾನೂನು ಸಚಿವ ಡಿ.ವಿ. ಸದಾನಂದ ಗೌಡ(ಬೆಂಗಳೂರು ಉತ್ತರ), ಸಚಿವರಾದ ಕಲ್‍ರಾಜ್ ಮಿಶ್ರಾ, ಉಮಾಭಾರತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ, ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತಿತರ ಪ್ರಮುಖರೂ ಸೇರಿದ್ದಾರೆ. ಇದೇ bsಳೆ, ಪ್ರಧಾನಿ ಮೋದಿ ಅವರ ವಾರಾಣಸಿ ಕ್ಷೇತ್ರದಲ್ಲಿ ಶೇ.16ರಷ್ಟು ಹಣವನ್ನು ಬಳಕೆ ಮಾಡಲಾಗಿದೆ.

SCROLL FOR NEXT