ಅರುಣಾ ಶಾನ್ ಬಾಗ್ 
ದೇಶ

ಉತ್ತರ ಪ್ರದೇಶದಲ್ಲಿದ್ದಾನಂತೆ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ

42 ವರ್ಷಗಳ ಸುದೀರ್ಘ ಕಾಲದ ಕೋಮಾದಲ್ಲಿದ್ದು ಇತ್ತೀಚೆಗೆ ನಿಧನರಾದ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ.....

ಮುಂಬಯಿ: 42 ವರ್ಷಗಳ ಸುದೀರ್ಘ ಕಾಲದ ಕೋಮಾದಲ್ಲಿದ್ದು ಇತ್ತೀಚೆಗೆ ನಿಧನರಾದ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಇದ್ದಾನೆಂದು ಪತ್ರಿಕೆಯೊಂದು ವರದಿ ಮಾಡಿದೆ.

ಆಸ್ಪತ್ರೆಯಲ್ಲಿ  ವಾರ್ಡ್ ಬಾಯ್ ಆಗಿದ್ದ ಸೋನಲಾಲ್ ಭಾರ್ತಾ ವಲ್ಮೀಕಿ ಉತ್ತರ ಪ್ರದೇಶದ ಗಾಜಿಯಾಬಾದ್ ನ ಪಾರ್ಪಾ ಗ್ರಾಮವೊಂದರಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಹಿಂದಿನ ಯಾವ ಘಟನೆಗಳು ನೆನಪಿಲ್ಲವಂತೆ. ಹೀಗಾಗಿ ಆತನ ವಿರುದ್ಧ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಂಬಯಿ ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 27 1973 ರಂದು ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದ ಸೋನಾಲಾಲ್ ಭಾರ್ತಾ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನ್ ಭಾಗ್ ಮೇಲೆ ಅತ್ಯಾಚಾರ ನಡೆಸಿ ನಾಯಿ ಕಟ್ಟುವ ಬೆಲ್ಟ್ ನಿಂದ ಕುತ್ತಿಗಿಗೆ ಬಿಗಿದಿದ್ದ. ಇನ್ನು ಅತ್ಯಾಚಾರ ಆರೋಪದಲ್ಲಿ ಜೈಲಿನಲ್ಲಿದ್ದ ಸೋನಾಲಾಲ್ 1980 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT