ದೇಶ

ಬಿಸಿಲ ಹೊಡೆತಕ್ಕೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ

Vishwanath S

ನವದೆಹಲಿ: ಭಾರತದಾದ್ಯಂತ ಬಿಸಿ ಗಾಳಿಯ ತೀವ್ರತೆ ಹೆಚ್ಚಲು ಜಾಗತಿಕ ತಾಪಮಾನ ಏರಿಕೆಯಾಗಿದ್ದೇ ಕಾರಣ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್‍ವೈರಾನ್‍ಮೆಂಟ್ (ಸಿಎಸ್‍ಇ) ಹೇಳಿದೆ.

ಅಷ್ಟೇ ಅಲ್ಲ, ಕಳೆದ 100 ವರ್ಷಗಳಲ್ಲಿ ಜಾಗತಿಕ ತಾಪಮಾನ ಸರಾಸರಿ .8 ಡಿಗ್ರಿಯಷ್ಟು ಹೆಚ್ಚಿದ್ದು, ಇನ್ನಷ್ಟು ಬಿಸಿ ಗಾಳಿ ವ್ಯಾಪಿಸುವ ಆತಂಕವಿದೆ ಎಂದೂ ತಿಳಿಸಿದೆ.

ಮಾನವಪ್ರೇರಿತ ಜಾಗತಿಕ ತಾಪ ಮಾನವು 2014 ಅನ್ನು ಅತ್ಯಂತ ಬಿಸಿ ವರ್ಷವನ್ನಾಗಿಸಿದೆ. ಭಾರತದ ಅತಿ ಹೆಚ್ಚು ತಾಪಮಾನವಿದ್ದ 10 ವರ್ಷಗಳ ಪೈಕಿ 8 ವರ್ಷಗಳು ಕಳೆದ ದಶಕಕ್ಕೆ (2001-2010) ಸೇರಿದ್ದು. ಹೀಗಾಗಿ ಇದು ಅತಿ ಉಷ್ಣತೆಯ ದಶಕ ಎಂಬ ದಾಖಲೆ ಬರೆದಿದೆ ಎಂದೂ ಸಿಎಸ್‍ಇ ತಿಳಿಸಿದೆ.

SCROLL FOR NEXT