ದೇಶ

36 ರಫೇಲ್ ವಿಮಾನ ಮಾತ್ರ ಸಾಕು: ಪರ್ರಿಕರ್

Srinivasamurthy VN

ನವದೆಹಲಿ: ಫ್ರಾನ್ಸ್ ನಿಂದ ಕೇವಲ 36 ವಿಮಾನಗಳನ್ನು ಭಾರತ ಖರೀದಿಸಲಿದೆ. ರಕ್ಷಣಾ ಪಡೆಗಳಿಗೆ 126 ವಿಮಾನಗಳು ಅಗತ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್
ತಿಳಿಸಿದ್ದಾರೆ.

ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಮಾಡಿದ್ದ ಒಪ್ಪಂದಂತೆ 126 ವಿಮಾನಗಳನ್ನು ಖರೀದಿಸುವುದು ಆರ್ಥಿಕವಾಗಿ ಸುಲಭವಾಗುವ ವಿಚಾರ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುಪಿಎ ನಿರ್ಧಾರ ಅತ್ಯಂತ ದುಬಾರಿಯಾಗಿತ್ತು ಎಂದು ಪರ್ರಿಕರ್ ತಿಳಿಸಿದ್ದಾರೆ. ಈ ಒಪ್ಪಂದ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು 10-11 ವರ್ಷಗಳು ಬೇಕಾಗುತ್ತಿತ್ತು.

ಜತೆಗೆ ರು.1.3 ಲಕ್ಷ ಕೋಟಿ ಮೊತ್ತ ಬೇಕಾಗುತ್ತಿತ್ತು. ಇದರಿಂದಾಗಿ ಸೇನೆಯ ಇತರ ಆಧುನೀಕರಣಕ್ಕೆ ತೊಂದರೆಯಾಗುತ್ತಿತ್ತು ಎಂದಿದ್ದಾರೆ ರಕ್ಷಣಾ ಸಚಿವ.

SCROLL FOR NEXT