ಡೆಹ್ರಾಡೂನ್: ನೆಸ್ಲೆ ಇಂಡಿಯಾದ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೆ ಒಳಪಡಿಸಲು ಉತ್ತರಾಖಂಡದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ನಿರ್ಧರಿಸಿದೆ.
ಮ್ಯಾಗಿಯಲ್ಲಿ ಸೀಸ ಮತ್ತು ರುಚಿ ಹೆಚ್ಚಿಸುವ ಅಂಶವಾಗಿರುವ ಮೊನೊಸೋಡಿಯಂ ಗ್ಲುಟಮೇಟ್ ಅನುಮತಿ ನೀಡಿರುವ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ಕೂಡ ಮ್ಯಾಗಿ ನೂಡಲ್ಸ್ ಅನ್ನು ತಪಾಸಣೆಗೆ ಒಳಪಡಿಸಿತ್ತು. ಜತೆಗೆ ಚಿತ್ರ ನಟ-ನಟಿಯ
ರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ವಿರುದ್ಧ ಕೂಡ ನೋಟಿಸ್ ಜಾರಿ ಮಾಡಲಾಗಿತ್ತು.