ಭೂಗತ ದೊರೆ ಚೋಟಾ ರಾಜನ್‍ (ಸಂಗ್ರಹ ಚಿತ್ರ) 
ದೇಶ

ಚೋಟಾ ರಾಜನ್ ಕರೆತರಲು ಪೊಲೀಸರ ತಂಡ ಇಂಡೋನೇಷ್ಯಾಕ್ಕೆ

ಭೂಗತ ದೊರೆ ಚೋಟಾ ರಾಜನ್‍ನನ್ನು ಕರೆತರಲು ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಪಡೆ ಭಾನುವಾರ ಇಂಡೋನೇಷ್ಯಾಗೆ ತಲುಪಿದೆ...

ನವದೆಹಲಿ/ಬಾಲಿ: ಭೂಗತ ದೊರೆ ಚೋಟಾ ರಾಜನ್‍ನನ್ನು ಕರೆತರಲು ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಪಡೆ ಭಾನುವಾರ ಇಂಡೋನೇಷ್ಯಾಗೆ ತಲುಪಿದೆ.

ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಅಧಿಕಾರಿಗಳಿಗೆ ಭಾರತ ಸರ್ಕಾರ ಪತ್ರ ಬರೆದು ರಾಜನ್ ನನ್ನು ಕಳಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿತ್ತು. ಕಳೆದ ವಾರ ಬಾಲಿ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದ್ದ ರಾಜನ್‍ನನ್ನು ಪ್ರಸ್ತುತ ಅಲ್ಲಿನ ಜೈಲೊಂದರಲ್ಲಿ ಇರಿಸಲಾಗಿದೆ.

ಜಕಾರ್ತಾದ ಭಾರತೀಯ ರಾಯಭಾರ ಕಚೇರಿ ಕಾರ್ಯದರ್ಶಿ ಸಂಜೀವ ಕುಮಾರ್ ಅಗರ್‍ವಾಲ್ ಅವರು ರಾಜನ್‍ನನ್ನು ಭೇಟಿ ಮಾಡಿ ಅರ್ಧ ಗಂಟೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ಅಧಿಕಾರಿಯೊಬ್ಬರು ರಾಜನ್‍ನನ್ನು ಭೇಟಿ ಮಾಡಿದ್ದಾರೆ. ಇಂಡೋನೇಷ್ಯಾ ಜತೆ ಭಾರತಕ್ಕೆ ಯಾವುದೇ ಗಡೀಪಾರು ಒಪ್ಪಂದಗಳಿಲ್ಲದ ಕಾರಣ ಆತನ ಹಸ್ತಾಂತರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರ ಕೋರಿತ್ತು. ಹಸ್ತಾಂತರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೆ ಸಮಯದ ಮಿತಿ ಹೇರಿಲ್ಲವೆಂದು ಇಂಡೋನೇಷ್ಯಾದ ಭಾರತೀಯ ರಾಯಭಾರಿ ಗುರ್ಜಿತ್ ಸಿಂಗ್ ಹೇಳಿದ್ದಾರೆ. ರಾಜನ್ ಮೇಲಿನ ಹೆಚ್ಚಿನ ಪ್ರಕರಣಗಳು ಮುಂಬೈ ಪೊಲೀಸರಲ್ಲಿದ್ದು, ಅವರು ಆತನನ್ನು ಮೊದಲು ವಶಕ್ಕೆ ತೆಗೆದುಕೊಳ್ಳಲಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ