ಬಾಲಿ: ಇಂಡೋನೇಷ್ಯಾದಲ್ಲಿ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಛೋಟಾ ರಾಜನ್ ಗೆ ಜೀವ ಭಯವಿದೆಯಂತೆ.
ಬಾಲಿಯ ಪೊಲೀಸರ ವಶದಲ್ಲಿರುವ ಛೋಟಾ ರಾಜನ್, ನನಗೆ ದಾವೂದ್ ಸಹಚರ ಛೋಟಾ ಶಕೀಲ್ ನಿಂದ ಜೀವ ಭಯವಿದೆ ಎಂದು ಹೇಳಿದ್ದಾನೆ.
ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗಿ. ಮುಂಬೈನ ಕೆಲ ಪೊಲೀಸರು ದಾವೂದ್ ಜೊತೆ ಸಂಪರ್ಕ ಹೊಂದಿದ್ದಾರೆ. ಅಲ್ಲಿ ನನಗೆ ರಕ್ಷಣೆ ಸಿಗುವುದಿಲ್ಲ. ಹಾಗಾಗಿ, ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗಿ ಎಂದು ಕೇಳಿಕೊಂಡಿದ್ದಾನೆ.
ದಾವೂದ್ ವಿರುದ್ಧ ನಾನು ನಿರಂತರವಾಗಿ ಹೋರಾಟ ನಡೆಸುತ್ತೇನೆ. ದಾವೂದ್ ಕಂಡರೆ ನನಗೆ ಭಯವಿಲ್ಲ. ಆದರೆ, ದೆಹಲಿಯಲ್ಲಿಯೇ ನನಗೆ ಆಶ್ರಯ ನೀಡಿ ಎಂದು ಛೋಟಾ ರಾಜನ್ ತಿಳಿಸಿದ್ದಾನೆ.
ಅಕ್ಟೋಬರ್ 26ರಂದು ಛೋಟಾ ರಾಜನ್ ನನ್ನು ಬಂಧಿಸಲಾಗಿತ್ತು. ಆತನನ್ನು ಭಾರತಕ್ಕೆ ಕರೆತರಲು ಭಾರತದ ಅಧಿಕಾರಗಳ ತಂಡ ಬಾಲಿಗೆ ತೆರಳಿದೆ. ಸಿಬಿಐ ಅಧಿಕಾರಿಗಳು ಅಲ್ಲೇ ಛೋಟಾ ರಾಜನನ್ನು ವಿಚಾರಣೆಗೆ ಒಳಪಡಿಸಿದ್ದು, ಇಂದು ಅಥವಾ ನಾಳೆ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ಇನ್ನು ಛೋಟಾ ರಾಜನನ್ನು ಮುಂಬೈ ಅಥವಾ ದೆಹಲಿಯಲ್ಲಿರಿಸುವುದರ ಬಗ್ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics