ಸಾಂದರ್ಭಿಕ ಚಿತ್ರ 
ದೇಶ

ಗೋಲ್ಡ್ ಬಾಂಡ್ ಗ್ರಾಂ ದರ ರು.2,684

ಭಾರತೀಯ ರಿಸರ್ವ್ ಬ್ಯಾಂಕ್ ಸವರ ನ್ ಗೋಲ್ಡ್ ಬಾಂಡ್‍ನ ಸಾರ್ವಜನಿಕ ವಿತರಣೆ ದರ ಪ್ರತಿ ಗ್ರಾಂಗೆ ರು.2,684 ನಿಗದಿಪಡಿಸಿ...

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸವರ ನ್ ಗೋಲ್ಡ್ ಬಾಂಡ್‍ನ ಸಾರ್ವಜನಿಕ ವಿತರಣೆ ದರ ಪ್ರತಿ ಗ್ರಾಂಗೆ ರು.2,684 ನಿಗದಿಪಡಿಸಿದೆ. ನವೆಂಬರ್ 5ರಿಂದ 20ರವರೆಗೂ ಬಾಂಡ್‍ಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. 
ಭೌತಿಕವಾಗಿ ಚಿನ್ನ ಖರೀದಿಸುವುದಕ್ಕೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಸವರನ್ ಗೋಲ್ಡ್ ಬಾಂಡ್ ಸ್ಕೀಂ ಪರಿಚಯಿಸಿದೆ. ಈ ಯೋಜನೆಯಡಿ ಶೇ.2.75 ಬಡ್ಡಿದರ ನೀಡಲಾಗುವುದು. ವ್ಯಕ್ತಿಯೊಬ್ಬರು ಕನಿಷ್ಠ 2 ಗ್ರಾಂ ಮತ್ತು ಗರಿಷ್ಠ 500 ಗ್ರಾಂವರೆಗೂ ಖರೀದಿಸಬಹುದು.
ಶೇ.0.999ರಷ್ಟು ಶುದ್ಧ ಚಿನ್ನ ಕಳೆದ ವಾರ ಮುಕ್ತಾಯ ದರದ ಆಧಾರದ ಮೇರೆಗೆ ದರ ನಿಗದಿಪಡಿಸಲಾಗಿದೆ. ಬಾಂಡ್‍ಗಳನ್ನು ಆಯ್ದ ಬ್ಯಾಂಕ್‍ಗಳು ಮತ್ತು ಅಂಚೆ ಕಚೇರಿಗಳ ಮೂಲಕ ನವೆಂಬರ್ 26ರಿಂದ ವಿತರಿಸಲಾಗುವುದು. ಇದು ಬಾಂಡ್‍ಗಳ ಮೊದಲ ಕಂತಾಗಿದೆ.
ಮುಂದೆ ಬಿಡುಗಡೆ ಮಾಡುವ ಕುರಿತು ತಿಳಿಸಲಾಗುವುದು ಎಂದು ಆರ್ ಬಿಐ ಹೇಳಿದೆ. ಬಾಂಡ್ ಗಳ ಅವಧಿ 8 ವರ್ಷಗಳಾಗಿದ್ದು ಐದು ವರ್ಷಗಳ ನಂತರ ಯಾವಾಗ ಬೇಕಾದರೂ ಹಿಂತಿರುಗಿಸಿ ಹಣ ಪಡೆಯಬಹುದು. ಬಾಂಡ್‍ಗಳ ಮೇಲಿನ ಗಳಿಕೆ ತೆರಿಗೆ ವ್ಯಾಪ್ತಿಗೆ ಬರಲಿದೆ. ಭೌತಿಕ ಚಿನ್ನಕ್ಕೆ ವಿಧಿಸುವಂತೆ ಬಂಡವಾಳ ಗಳಿಕೆ ತೆರಿಗೆಯೂ ಅನ್ವಯವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT