ನವದೆಹಲಿ: ವಿಷಕಾರಿ ಸೀಸದ ಅಂಶಗಳ ಬಗ್ಗೆ ಸಾಕಷ್ಟು ಆತಂಕ ಹುಟ್ಟಿಸಿದ್ದ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಸದ್ಯದಲ್ಲೇ ಮತ್ತೆ ಮಾರುಕಟ್ಟೆಗೆ ಬರಲಿದೆ.
ಹೊಸದಾಗಿ ಸಿದ್ಧಪಡಿಸಿದ ಮ್ಯಾಗಿ ಸ್ಯಾಂಪಲ್ಸ್‌ಗಳು ಸುರಕ್ಷಿತ ಎಂದು ಸರ್ಕಾರದ ಲ್ಯಾಬ್‌ಗಳು ಮಾನ್ಯತೆ ನೀಡಿದ್ದು, ಈ ತಿಂಗಳಿಂದಲೇ ಮ್ಯಾಗಿ ಮಾರಾಟ ಆರಂಭವಾಗಲಿದೆ ಎಂದು ಬುಧವಾರ ನೆಸ್ಲೆ ಕಂಪನಿ ತಿಳಿಸಿದೆ.
ಕರ್ನಾಟಕದ ನಂಜನಗೂಡು, ಪಂಜಾಬ್‌ನ ಮೊಗಾ ಹಾಗೂ ಗೋವಾದ ಬಿಚೊಲಿಮ್ ಪ್ಲಾಂಟ್‌ಗಳಲ್ಲಿ ಹೊಸದಾಗಿ ತಯಾರಿಸಿದ ಎಲ್ಲಾ ಮ್ಯಾಗಿ ಸ್ಯಾಂಪಲ್‌ಗಳು ಸುರಕ್ಷಿತ ಎಂದು ಅಂಗೀಕೃತ ಲ್ಯಾಬ್‌ಗಳು ಸ್ಪಷ್ಟಪಡಿಸಿವೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮ್ಯಾಗಿ ನೂಡಲ್ಸ್ ನಲ್ಲಿ ಅಪಾಯಕಾರಿ ಮೋನೋ ಸೋಡಿಯಂ ಗ್ಲುಟಾಮ್ಯಾಟ್ ಮತ್ತು ಸೀಸದ ಪ್ರಮಾಣ ಹೆಚ್ಚಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮ್ಯಾಗಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿತ್ತು.