ಗುಲಾಂ ಅಲಿ 
ದೇಶ

ಡಿಸೆಂಬರ್ 3ರಂದು ಲಕ್ನೋದಲ್ಲಿ ಕಾರ್ಯಕ್ರಮ ನಡೆಸಲು ಒಪ್ಪಿದ ಗುಲಾಂ ಅಲಿ

ಈ ಹಿಂದೆ ನಿಗದಿಯಾದಂತೆ ಡಿಸೆಂಬರ್ 3ರಂದು ನಡೆಯಲಿರುವ ಲಕ್ನೋ ಮಹೋತ್ಸವದಲ್ಲಿ ಗುಲಾಂ ಅಲಿ ಸಂಗೀತ ಕಚೇರಿ ನಡೆಯಲಿದೆ...

ಲಕ್ನೋ: ಭಾರತದಲ್ಲಿ ನಿಗದಿಯಾಗಿದ್ದ ಎಲ್ಲ ಸಂಗೀತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಎಂದು ಹೇಳಿದ್ದ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಈಗ ಡಿಸೆಂಬರ್ 3ರಂದು ಲಕ್ನೋದಲ್ಲಿ ಸಂಗೀತ ಕಚೇರಿ ನಡೆಸಲು ಒಪ್ಪಿದ್ದಾರೆ.
ಈ ಹಿಂದೆ ನಿಗದಿಯಾದಂತೆ ಡಿಸೆಂಬರ್ 3ರಂದು ನಡೆಯಲಿರುವ ಲಕ್ನೋ ಮಹೋತ್ಸವದಲ್ಲಿ ಗುಲಾಂ ಅಲಿ ಸಂಗೀತ ಕಚೇರಿ ನಡೆಯಲಿದೆ.
ದೆಹಲಿಯಲ್ಲಿ ಗುಲಾಂ ಅಲಿಯವರ ಸಂಗೀತ ಕಾರ್ಯಕ್ರಮ ನವೆಂಬರ್ 8 ಕ್ಕೆ ನಿಗದಿಯಾಗಿತ್ತು. ಆದರೆ ತಾನು ಯಾವುದೇ ರಾಜಕೀಯ ಜಟಾಪಟಿಯ ನಡುವೆ ಬರಲು ಇಚ್ಛಿಸುವುದಿಲ್ಲ ಎಂದು ಹೇಳಿ ಅಲಿ ತಮ್ಮ ಎಲ್ಲ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.
ಏತನ್ಮಧ್ಯೆ, ಆಯೋಜಕರು ಅಲಿ ಅವರ ಮಗನೊಂದಿಗೆ ಮಾತನಾಡಿ ಮನವೊಲಿಸಿ ಕಾರ್ಯಕ್ರಮ ರದ್ದಾಗದಂತೆ ನೋಡಿಕೊಂಡಿದ್ದಾರೆ. 
ಕಳೆದ ರಾತ್ರಿ 10.30ಕ್ಕೆ ಲಕ್ನೋ ಮಹೋತ್ಸವ ಸಮಿತಿ  ಗುಲಾಂ ಅಲಿಯವರ ಪುತ್ರ ಅಮೀರ್ ಜತೆ ಮಾತುಕತೆ ನಡೆಸಿ, ಡಿಸೆಂಬರ್ 3ರಂದು ನಡೆಯುವ ಕಾರ್ಯಕ್ರಮ ನಿಗದಿತ ವೇಳೆಗೆ ನಡೆಯುವುದಾಗಿ ದೃಢಪಡಿಸಿಕೊಂಡಿದೆ ಎಂದು ಜಿಲ್ಲಾ ಮೆಜಿಸ್ಟ್ರೇಟರ್ ಅವರು ಸುದ್ದಿಮೂಲಗಳಿಗೆ ಹೇಳಿದ್ದಾರೆ.
ಈ ಬಗ್ಗೆ ಅಲಿಯವರು ತಮ್ಮ ದೃಢೀಕರಣ ಪತ್ರ ಮತ್ತು ವೀಡಿಯೋ ಸಂದೇಶವನ್ನು ಕಳಿಸಿಕೊಡಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ