ದೇಶ

ಕಲ್ಬುರ್ಗಿ ಹತ್ಯೆಗಿಲ್ಲ ಸಮರ್ಥನೆ: ಪ್ರಧಾನಿ ಸಿಂಗ್

Srinivasamurthy VN

ಮುಂಬೈ: ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ದಾಭೋಲ್ಕರ್, ಪಾನ್ಸರೆ ಯಂಥವರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಗಣತಂತ್ರದ ಉಳಿವಿಗೆ ಏಕತೆ ಹಾಗೂ ವೈವಿಧ್ಯತೆ, ಜಾತ್ಯತೀತತೆ ಮತ್ತು ಬಹುತ್ವವನ್ನು ಗೌರವಿಸುವುದು ಅತ್ಯಗತ್ಯ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ.

ದೇಶಾದ್ಯಂತ ಅಸಹಿಷ್ಣುತೆ ವಿರುದ್ಧ ಹೆಚ್ಚುತ್ತಿರುವ ಅಸಹನೆಗೆ ಈಗ ಸಿಂಗ್ ಅವರೂ ದನಿಗೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಅಸಹಿಷ್ಣುತೆ ಕುರಿತು ಮಾತನಾಡಿದ ಅವರು, ವಿಚಾರವಾದಿಗಳ  ಹತ್ಯೆ, ವಿರೋಧಾಭಿಪ್ರಾಯವನ್ನು ಧಮನಿಸುವ ಕೃತ್ಯಗಳು, ದ್ವೇಷದ ವಾತಾವರಣಕ್ಕೆ ಸಂಬಂಧಿಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಮೂಲಭೂತವಾದಿ ಗುಂಪುಗಳು ಚಿಂತನೆ, ನಂಬಿಕೆ,  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಲಜ್ಜಾಹೀನ ಹೊಡೆತ ನೀಡುತ್ತಿವೆ ಎಂದು ಹೇಳಿದ್ದಾರೆ.

SCROLL FOR NEXT