ನವದೆಹಲಿ: ಆರ್ ಎಸ್ ಎಸ್ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ದೇಶದ ಶಾಂತಿ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್ ಉಪಧ್ಯಾಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಾಧಾರಣ ಚಿಂತನೆ ದೇಶದ ಜನಕ್ಕೆ ಬೇಕಾಗಿಲ್ಲ. ಸ್ವಾತಂತ್ರ್ಯವಿಲ್ಲದೇ ಶಾಂತಿಯಿಲ್ಲ, ಬಿಜೆಪಿಯಿಂದ ಜನತೆಯ ಶಾಂತಿ ಮತ್ತು ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ರಾಷ್ಟ್ರೀಯ ಗುಂಪುಗಳು ನಮ್ಮ ಸ್ವಾತಂತ್ರ್ಯ, ನಮ್ಮ ಹಕ್ಕು ಮತ್ತು ನಮ್ಮ ಪ್ರಜಾಸತ್ತಾತ್ಮಕ ಸ್ಥಾನವನ್ನು ಕಸಿದುಕೊಂಡಿದೆ ಎಂದ ರಾಹುಲ್ ಗಾಂಧಿ ದೇಶದಲ್ಲಿ ಅಸಹಿಷ್ಣುತೆ ಬೀಜ ಬಿತ್ತಿರುವ ಬಿಜೆಪಿ ಕಳೆದ 18 ತಿಂಗಳಿಂದ ಗಣರಾಜ್ಯದ ಹಕ್ಕನ್ನು ಕಿತ್ತು ಕೊಳ್ಳಲು ತಯಾರಿ ನಡೆಸಿದೆ ಎಂದು ದೂರಿದರು.
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ತುಂಬಾ ಸಹಿಷ್ಣುತೆಯ ವ್ಯಕ್ತಿಯಾಗಿದ್ದರು ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.