ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇಂದು 89ನೆ ವಸಂತಕ್ಕೆ ಪಾದಾರ್ಪಣೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೋದಿ ಅವರು ಹಿರಿಯ ನಾಯಕನ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಎಲ್.ಕೆ.ಅಡ್ವಾಣಿ ಅವರು ನಮಗೆಲ್ಲ ಹಿರಿಯರು, ಗುರುಗಳು, ಮಾರ್ಗದರ್ಶಕರು ಆಗಿದ್ದು, ಅವರು ಇನ್ನೂ ನೂರು ವರ್ಷ ಬಾಳಲಿ ಎಂದು ಮೋದಿ ಹಾರೈಸಿದರು.
ಈ ದೇಶಕ್ಕೆ ಅಡ್ವಾಣಿ ಅವರು ನೀಡಿರುವ ಕೊಡುಗೆ ಅನನ್ಯ, ಅವರ ಅನುಭವ, ಜ್ಞಾನಗಳು ನಮಗೆಲ್ಲ ದಾರಿ ದೀಪವಾಗಲಿ ಎಂದ ಅವರು, ನಾನು ಅಡ್ವಾಣಿಯವರಿಂದ ಬಹಳ ಕಲಿತಿದ್ದೇನೆ. ಅವರೊಬ್ಬ ಒಳ್ಳೆಯ ಗುರು ಎಂದು ಮೋದಿ ಹೇಳಿದ್ದಾರೆ.