ನಿತೀಶ್ ಕುಮಾರ್ ಜತೆ ಪ್ರಶಾಂತ್ ಕಿಶೋರ್ (ಕೃಪೆ: ಎನ್ ಡಿಟಿವಿ) 
ದೇಶ

ನಿತೀಶ್ ಜಯದ ಹಿಂದೆ ಇದೆ ಪ್ರಶಾಂತ್ ಕಿಶೋರ್‌ನ ಪ್ರಚಾರತಂತ್ರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಹೀರೋ ಆಗಿ ಮಿಂಚಿದರೆ, ಪ್ರಚಾರ ಕಾರ್ಯದಲ್ಲಿ 37ರ ಹರೆಯದ...

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಹೀರೋ ಆಗಿ ಮಿಂಚಿದರೆ,  ಪ್ರಚಾರ ಕಾರ್ಯದಲ್ಲಿ 37ರ ಹರೆಯದ ಪ್ರಶಾಂತ್ ಕಿಶೋರ್ ಹೀರೋ ಆಗಿದ್ದಾರೆ. ಈ ಬಾರಿ ನಿತೀಶ್ ಗಾಗಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರಶಾಂತ್ ಕಿಶೋರ್ ಅವರ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್  ಕಮಿಟಿ (ಐಪಿಸಿ) ಆಗಿತ್ತು.  ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೂ 2012 ಗುಜರಾತ್ ಚುನಾವಣೆಯಲ್ಲಿ  ಪ್ರಚಾರ ಕಾರ್ಯಗಳನ್ನು ನಡೆಸಿದ್ದು ಪ್ರಶಾಂತ್ ಅವರ ಇದೇ ಸಮಿತಿ ಆಗಿತ್ತು. 
ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸುವಲ್ಲಿ ಪ್ರಧಾನ ಪಾತ್ರವಹಿಸಿದ ಪ್ರಚಾರ ಕಾರ್ಯಗಳನ್ನು ರೂಪಿಸಿದ್ದು ಇದೇ ಪ್ರಶಾಂತ್. ಜನರೊಂದಿಗೆ ಸಂವಹನ ನಡೆಸಲು ಚಾಯ್ ಪೇ ಚರ್ಚಾ,  3 ಡಿ ರ್ಯಾಲಿ ಮೊದಲಾದ ಕಾರ್ಯಕ್ರಮಗಳ ಐಡಿಯಾ ನೀಡಿದ್ದು ಪ್ರಶಾಂತ್ ಅವರ ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನನ್ಸ್ (ಸಿಎಜಿ) ಆಗಿತ್ತು. ಇದೇ ರೀತಿಯ ಪ್ರಚಾರ ಕಾರ್ಯಗಳನ್ನು ಬಿಹಾರದಲ್ಲಿಯೂ ಮಾಡಲಾಗಿತ್ತು.
ಲೋಕಸಭಾ ಚುನಾವಣೆಯ ನಂತರ ಸಿಎಜಿಯನ್ನು ವಿಲೀನಗೊಳಿಸಿ ಪ್ರಶಾಂತ್ ಐಪಿಸಿ ಎಂಬ ಹೊಸ ಸಂಸ್ಥೆ ಸ್ಥಾಪಿಸಿದ್ದರು. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದು ಈ ಸಂಸ್ಥೆಯ ಕೆಲಸ. ಸಾಮಾಜಿಕ ತಾಣ ಮತ್ತು ಸದಸ್ಯರ ಮೂಲಕ ತಮ್ಮ ನೇತಾರರನ್ನು ಜನರಲ್ಲಿ ತಲುಪಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತದೆ.
ನಿತೀಶ್ ಅವರು ಜನಸಂಪರ್ಕ ಕಾರ್ಯಕ್ರಮವಾದ ಜನತಾ ದರ್ಬಾರ್‌ಗೆ ನವೀನತೆ ನೀಡಿದ್ದು ಇದೇ ಪ್ರಶಾಂತ್. ಚುನಾವಣಾ ಪ್ರಚಾರದ ಗತಿಯನ್ನೇ ಬದಲಿಸಿದ ಬಿಹಾರಿ ಆರ್ ಬಾಹರಿ (ಬಿಹಾರಿನವ ಮತ್ತು ಹೊರಗಿನವ) ಪ್ರಚಾರ ಕಾರ್ಯವೂ ಪ್ರಶಾಂತ್‌ರದ್ದೇ ಕೊಡುಗೆ.  ಪ್ರಧಾನಿ ನರೇಂದ್ರ ಮೋದಿಯವರನ್ನು ಬಳಸಿ ಬಿಜೆಪಿ ಪ್ರಚಾರ ನಡೆಸಿದಾಗ ಬಿಹಾರಿನವರು ಬೇಕೋ, ಹೊರಗಿನವರು ಬೇಕೋ ಎಂಬ ಪ್ರಶ್ನೆಯನ್ನಿಟ್ಟುಕೊಂಡು ನಿತೀಶ್ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದ್ದು ಬಿಹಾರ ಚುನಾವಣೆಯಲ್ಲಿ ಫಲ ನೀಡಿದೆ. 
ಜನಗಳನ್ನು ಆಕರ್ಷಿಸುವಂತಹಾ ರೀತಿಯಲ್ಲಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಪ್ರಶಾಂತ್ ಹೊಸ ಹೊಸ ರೀತಿಗಳನ್ನು ಅನುಷ್ಠಾನ ಮಾಡಿ ಗೆಲುವು ಸಾಧಿಸಿದ್ದಾರೆ. ಹಲವಾರು ಐಐಟಿ, ಐಐಎಂ ಪದವೀಧರರು ಪ್ರಶಾಂತ್ ಅವರ ಸಂಸ್ಥೆಯಲ್ಲಿದ್ದೂ ಹೊಸ ರೀತಿಯ ಪ್ರಚಾರ ತಂತ್ರಗಳನ್ನು ಇವರು ರೂಪಿಸುತ್ತಾರೆ. 
ವಿಶ್ವಸಂಸ್ಥೆಯ ಆರೋಗ್ಯ ತಜ್ಞರಾಗಿದ್ದ ಪ್ರಶಾಂತ್ 2011 ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬಂದ ನಂತರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!