ರಾಹುಲ್ ಗಾಂಧಿ- ನಯನತಾರಾ ಸೆಹಾಗಲ್ 
ದೇಶ

ರಾಹುಲ್‍ರಲ್ಲಿ ಬದಲಾವಣೆ ಕಾಣುತ್ತಿದೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ `ಬಹುದೊಡ್ಡ ಬದಲಾವಣೆ' ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಜವಾಹರ್ ಲಾಲ್...

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ `ಬಹುದೊಡ್ಡ ಬದಲಾವಣೆ' ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಮೊಮ್ಮಗಳು ಹಾಗೂ ಖ್ಯಾತ ಲೇಖಕಿ ನಯನತಾರಾ ಸೆಹಗಲ್ ಹೇಳಿದ್ದಾರೆ. 
``ಕೆಲ ವರ್ಷಗಳ ಹಿಂದೆ ಎಲ್ಲರಂ ತೆಯೇ ನಾನು ಕೂಡ, ರಾಹುಲ್ ರಾಜಕೀಯದಲ್ಲಿರಲು ಬಯಸಲಿಕ್ಕಿಲ್ಲ ಎಂದೇ ಭಾವಿಸಿದ್ದೆ. ಅಲ್ಲದೆ, ಅವರು ಬೇರೆ ಯಾವುದಾದರೂ ಕ್ಷೇತ್ರದತ್ತ ಮುಖ ಮಾಡುವುದು ಒಳಿತು ಎಂದೇ ಯೋಚಿಸಿದ್ದೆ. ಆದರೆ, ಈಗ ಅವರಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇತ್ತೀಚೆಗೆ, ಬಿಹಾರ ಚುನಾವಣೆಗೆ ಸಂಬಂಧಿಸಿ ರಾಹುಲ್ ಮಾತನಾಡಿದ್ದನ್ನು ನೋಡಿದೆ. ಅವರ ಮಾತು ತುಂಬಾ ಪ್ರಭಾವಶಾಲಿಯಾಗಿತ್ತು ಹಾಗೂ ತಮ್ಮ ಅಂಕಿ ಅಂಶಗಳಲ್ಲೂ ಅವರು ಪಕ್ಕಾ ಆಗಿದ್ದರು.
ಈ ಮೊದಲು ಅವರು ತೆರೆಯ ಹಿಂದೆ ಯುವ ಕಾಂಗ್ರೆಸ್ ಅನ್ನು ಸಂಘಟಿತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈಗ ಅವರಲ್ಲಿ ಭಾರಿ ಬದಲಾವಣೆ ಆಗಿರುವುದು ಸರಿಯಾಗಿ ಗೋಚರಿಸುತ್ತಿದೆ. ಇದು ಸಕಾರಾತ್ಮಕ ಬೆಳವಣಿಗೆಯೂ ಹೌದು ಎಂದಿದ್ದಾರೆ ಸೆಹಗಲ್.  ಇದೇ ವೇಳೆ, ನಿಮಗೆಂದಾದರೂ ರಾಜಕೀಯ ಸೇರುವ ಆಸಕ್ತಿಯಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೆಹಗಲ್ ಖಂಡಿತಾ ಇಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ: RCB ಗೆ 18 ರನ್ ಗಳ ಭರ್ಜರಿ ಗೆಲುವು!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

SCROLL FOR NEXT