ದೇಶ

ಪಟಾಕಿ ಹೊಡೆಯದ ಪಾಕ್

Rashmi Kasaragodu
ನವದೆಹಲಿ: ಬಿಹಾರ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಭಾರತಕ್ಕಿಂತ ಪಾಕಿಸ್ತಾನದ ಪ್ರಸ್ತಾಪ ಮಾಡಿದ್ದೇ ಹೆಚ್ಚು. ಅಕಸ್ಮಾತ್ ಬಿಜೆಪಿ ಸೋತರೆ ಪಾಕಿಸ್ತಾನದವ್ರು ಭರ್ಜರಿ ಪಟಾಕಿ ಹೊಡೀತಾರೆ ಎಂಬ ಶಾ ಮಾ ತು ಈಗ ಟ್ವಿಟರ್‍ಗಳಲ್ಲಿ ಜೋಕ್‍ಗೆ ಬಳಕೆಯಾಗಿದೆ. ಆದರೆ ನಿಜಕ್ಕೂ ಪಾಕ್ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಆನ್‍ಲೈನ್ ನಲ್ಲಿ ಗಮನಿಸಿದರೆ ಅಲ್ಲಿ ಒಂದಷ್ಟು ಹಾಸ್ಯ ಮತ್ತು ತಿರಸ್ಕಾರಗಳು ಕಾಣುತ್ತಿವೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಶೆರ್ರಿ ರೆಹಮಾನ್ ತಮ್ಮ ಟ್ವೀಟ್‍ನಲ್ಲಿ, ಪಟಾಕೀನಾ? ಕ್ರಿಕೆಟ್‍ನಲ್ಲಿ ಭಾರತ ಸೋತರೆ ಹೊಡೀತಿದ್ವೋ ಏನೋ. ಬಿಹಾರದಲ್ಲಿ ಬಿಜೆಪಿ ಗೆದ್ರೂ ಸೋತ್ರೂ ಅದು ಭಾರತಕ್ಕಷ್ಟೆ ಮುಖ್ಯ ಆಗತ್ತೆ ವಿನಃ ಇನ್ಯಾರಿಗೂ ಮುಖ್ಯವಾಗದು.'' ಎಂದು ತಮ್ಮ ಉದಾಸೀನ ತೋರಿಸಿದ್ದಾರೆ. ಇಷ್ಟಾಗಿಯೂ ಪಾಕ್‍ನಲ್ಲಿ ಬಿಹಾರ್, ಬಿಜೆಪಿ ಹಾಗೂ ಬಿಹಾರ್ ರಿಸಲ್ಟ್  ಎಂಬ ಟ್ವಿಟರ್‍ಹ್ಯಾಂಡರ್ ಗಳು ಟ್ರೆಂಡ್ ಆಗಿದ್ದು ಕಂಡುಬಂದಿವೆ. ಪಾಕ್ ಪತ್ರಕರ್ತ ಆಮಿರ್ ಮತಿನ್, ಸೋತರೂ ಗೆದ್ದರೂ ಅದು ಮೋದಿ ವರ್ತನೆ ಮೇಲೆ ಪರಿಣಾಮ ಬೀರಲಿದ್ದು ಭಾರತ-ಪಾಕ್ ನಡುವಣ ಗೇಮ್  ಚೇಂಜರ್ ಆಗಲಿದೆ'' ಎಂದು ಭವಿಷ್ಯ ನುಡಿದಿದ್ದಾರೆ. ಮಾನವಹಕ್ಕುಗಳ ಹೋರಾಟಗಾರ್ತಿ ಮರ್ವೀ ಟ್ವೀಟ್ ಮಾಡಿ, ಬಿಹಾರ ಫಲಿತಾಂಶ ಭಾರತಕ್ಕೆ ಮುಖ್ಯವಷ್ಟೆ. ಪಾಕಿಸ್ತಾನ ಚಿಂತಿಸಲು ಇದಕ್ಕಿಂತ ಮುಖ್ಯವಾದ ಕೆಲವು ವಿಷಯಗಳಿವೆ'' ಎಂದು ಮೂಗುಮುರಿದಿದ್ದಾರೆ.
SCROLL FOR NEXT