ಶತೃಘ್ನ ಸಿನ್ಹಾರನ್ನು ನಾಯಿಗೆ ಹೋಲಿಸಿದ ಕೈಲಾಶ್ ವಿಜಯವರ್ಗಿಯ
ಬಿಜೆಪಿ ಮತ್ತೊಬ್ಬ ಸಂಸದ ಕೈಲಾಶ್ ವಿಜಯ ವರ್ಗೀಯ ಶತೃಘ್ನ ಸಿನ್ಹಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ.
ನವದೆಹಲಿ: ಬಿಹಾರ ವಿಧಾನ ಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಪಕ್ಷವಿರೋಧಿ ಹೇಳಿಕೆ ನೀಡಿದ ಹಿರಿಯ ನಟ ಹಾಗೂ ಸಂಸದ ಶತೃಘ್ನ ಸಿನ್ಹಾ ಅವರನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಮತ್ತೊಬ್ಬ ಸಂಸದ ಕೈಲಾಶ್ ವಿಜಯ ವರ್ಗೀಯ ಶತೃಘ್ನ ಸಿನ್ಹಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ. "ಜಬ್ ಗಾಡಿ ಚಲ್ತಾ ಹೈ ಕುತ್ತಾ ನೀಚೆ ಚಲ್ತಾ ಹೈ, ಕುತ್ತಾ ಸಮ್ಜಾತಾ ಹೈಗಾಡಿ ಮೇರೆ ಭರೋಸೆ ಚಲ್ ರಹಿ ಹೈ" ಕಾರು ಓಡುತ್ತಿರುವಾಗ ನಾಯಿ ಹಿಂದೆ ಓಡಿಬರುತ್ತಿರುತ್ತೆ, ಆದರೆ ನಾಯಿ ತನ್ನಿಂದಲೇ ಕಾರು ಓಡುತ್ತಿದೆ ಎಂಬ ಭ್ರಮೆಯಲ್ಲಿರುತ್ತದೆ. ಹಾಗೆ ಶತೃಘ್ನ ಸಿನ್ಹಾ ಕೂಡ ತಮ್ಮಿಂದಲೇ ಪಕ್ಷ ನಿಂತಿದೆ ಎಂಬ ಭಾವನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ನಡೆಯುತ್ತಿಲ್ಲ. ಇಡೀ ಸಂಘಟನೆಯೇ ಬಿಜೆಪಿ ಹಿಂದಿದೆ ಎಂದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.