ಮುಂಬೈ: ಭಾರತದಲ್ಲಿ ವಾಣಿಜ್ಯ ಮತ್ತು ಸಾಮಥ್ರ್ಯ ವಿಸ್ತರಣೆಗೆ ರು.13,000 ಕೋಟಿ ಬಂಡವಾಳ ತೊಡಗಿಸುವುದಾಗಿ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಪ್ರಕಟಿಸಿದೆ.
ಪೇಮೆಂಟ್ ಬ್ಯಾಂಕ್ ಗಳಿಗೆ ಅಗತ್ಯವಾದ ನೆಟ್‍ವರ್ಕ್ ವಿಸ್ತರಿಸಲು ದೇಶದಲ್ಲಿ ಹೊಸ ಡೇಟಾ ಕೇಂದ್ರವನ್ನು ಸ್ಥಾಪಿಸಲು ಈ ಬಂಡವಾಳ ಬಳಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಬಂಡವಾಳದಲ್ಲಿ 8 ಸಾವಿರ ಕೋಟಿ ನೆಟ್ ವರ್ಕ್ ವಿಸ್ತರಣೆ, 3 ಸಾವಿರ ಕೋಟಿ ಸಾಮಥ್ರ್ಯ ಹೆಚ್ಚಳ, ಸಾವಿರ ಕೋಟಿ ಹೈಟೆಕ್ ಟಯರ್-4 ಡೇಟಾ ಕೇಂದ್ರ ಸ್ಥಾಪಿಸಲು ಹೂಡಿಕೆ ಮಾಡಲಾಗುವುದು.
ಉಳಿದ ಸಾವಿರ ಕೋಟಿಗಳನ್ನು ಪೇಮೆಂಟ್ ಬ್ಯಾಂಕ್ ಗಳಿಗೆ ಅಗತ್ಯವಾದ ಅಂತರಜಾಲ ರೂಪಿಸಲು ಬಳಸಲಾಗುವುದು ಎಂದು ಕಂಪನಿ ಹೇಳಿದೆ.